ನವದೆಹಲಿ:ರಿಯಲ್ ಎಸ್ಟೇಟ್ ಕಂಪನಿ ಯುನಿಟೆಕ್ನ ಹಗರಣದ ಆರೋಪಿಗಳಾದ ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ಅವರಿಗೆ ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ತಿಹಾರ್ ಜೈಲಿನ 32 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸುಪ್ರೀಂಕೋರ್ಟ್ನ ಆದೇಶದ ಮೇರೆಗೆ ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಅವರು ನಡೆಸಿದ ತನಿಖೆಯಲ್ಲಿ ತಿಹಾರ್ ಜೈಲಿನಲ್ಲಿರುವ ಇಬ್ಬರೂ ಆರೋಪಿಗಳಿಗೆ ಅಧಿಕಾರಿಗಳು ಸಹಕಾರ ನೀಡಿದ್ದಾರೆಂಬ ವಿಚಾರ ಬೆಳಕಿಗೆ ಬಂದಿದೆ.
ತಿಹಾರ್ ಜೈಲಿನಿಂದಲೇ ಭ್ರಷ್ಟಾಚಾರ ನಡೆಸುತ್ತಿರುವ ಆರೋಪ ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ಅವರ ಮೇಲಿತ್ತು. ಆ ಭ್ರಷ್ಟಾಚಾರಕ್ಕೆ ಜೈಲಿನ ಅಧಿಕಾರಿಗಳು ಸಹಕಾರ ನೀಡಿದ್ದರೆಂದು ಕೂಡಾ ಆರೋಪ ಮಾಡಲಾಗಿತ್ತು.