ಕರ್ನಾಟಕ

karnataka

ETV Bharat / bharat

GST: ಅಕ್ಟೋಬರ್ 1ರಿಂದ ಆನ್‌ಲೈನ್ ಗೇಮಿಂಗ್, ಕುದುರೆ ರೇಸಿಂಗ್‌, ಕ್ಯಾಸಿನೋಗೆ ಶೇ.28ರಷ್ಟು ಜಿಎಸ್​ಟಿ ಅನ್ವಯ

GST: ಅಕ್ಟೋಬರ್ 1ರಿಂದ ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲೆ ಶೇ.28ರಷ್ಟು ಜಿಎಸ್​ಟಿ ಅನ್ವಯವಾಗಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ.

GST: ಅಕ್ಟೋಬರ್ 1ರಿಂದ ಆನ್‌ಲೈನ್ ಗೇಮಿಂಗ್, ಕುದುರೆ ರೇಸಿಂಗ್‌, ಕ್ಯಾಸಿನೋಗೆ ಶೇ.28ರಷ್ಟು ಜಿಎಸ್​ಟಿ ಅನ್ವಯ
FinMin notifies Oct 1 date for implementing amended GST law provisions for e-gaming

By PTI

Published : Sep 30, 2023, 2:04 PM IST

ನವದೆಹಲಿ: ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳಿಗೆ ತೆರಿಗೆ ವಿಧಿಸಲು ತಿದ್ದುಪಡಿ ಮಾಡಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾನೂನು ನಿಬಂಧನೆಗಳು ಅಕ್ಟೋಬರ್ 1ರಿಂದ ಅನುಷ್ಠಾನಕ್ಕೆ ಬರುವಂತೆ ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಕೇಂದ್ರೀಯ ಜಿಎಸ್​ಟಿ ಕಾಯ್ದೆ ಬದಲಾವಣೆಗಳ ಪ್ರಕಾರ, ಇ-ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳನ್ನು ಇನ್ಮುಂದೆ ಲಾಟರಿ, ಬೆಟ್ಟಿಂಗ್ ಮತ್ತು ಜೂಜಿನಂತೆಯೇ ಕ್ರಮಬದ್ಧ ಹಕ್ಕುಗಳು (actionable claims) ಎಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಕಟ್ಟುವ ಬೆಟ್ಟಿಂಗ್​ನ ಪೂರ್ಣ ಮುಖಬೆಲೆಯ ಮೇಲೆ ಶೇ.28ರಷ್ಟು ಜಿಟಿಎಸ್​ ಅನ್ವಯವಾಗಲಿದೆ. ಅಲ್ಲದೇ, ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ಕಾಯ್ದೆಯ ತಿದ್ದುಪಡಿಗಳು, ಕಡಲಾಚೆಯ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಭಾರತದಲ್ಲಿ ನೋಂದಣಿಯನ್ನು ಮಾಡಿಕೊಳ್ಳುವುದು ಮತ್ತು ದೇಶೀಯ ಕಾನೂನಿಗೆ ಅನುಸಾರವಾಗಿ ತೆರಿಗೆಗಳನ್ನು ಪಾವತಿಸುವುದನ್ನು ಕಡ್ಡಾಯಗೊಳಿಸಿದೆ.

ಇದನ್ನೂ ಓದಿ:ಡ್ರೀಮ್​11 ಸೇರಿ ಆನ್ಲೈನ್​ ಗೇಮಿಂಗ್​ ಕಂಪನಿಗಳಿಗೆ 55 ಸಾವಿರ ಕೋಟಿ ರೂ. ಜಿಎಸ್​ಟಿ ಬಾಕಿ ನೋಟಿಸ್​

ಜುಲೈ ಮತ್ತು ಆಗಸ್ಟ್‌ನಲ್ಲಿ ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಒಳಗೊಂಡಿರುವ ಜಿಎಸ್‌ಟಿ ಕೌನ್ಸಿಲ್​ ಸಭೆಗಳಲ್ಲಿ ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಹಾಗೂ ಕುದುರೆ ರೇಸಿಂಗ್‌ಗಳನ್ನು ತೆರಿಗೆ ವಿಧಿಸಬಹುದಾದ ಕ್ಲೈಮ್‌ಗಳಾಗಿ ಸೇರಿಸಲು ಕಾನೂನಿಗೆ ತಿದ್ದುಪಡಿ ತರಲು ಅನುಮೋದಿಸಲಾಗಿತ್ತು. ಜೊತೆಗೆ ಇಂತಹ ಬೆಟ್ ಮೌಲ್ಯದ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿತ್ತು.

ಜಿಎಸ್​ಟಿ ಕೌನ್ಸಿಲ್‌ ನಿರ್ಧಾರವನ್ನು ಜಾರಿಗೆ ತರಲು ಕೇಂದ್ರ ಜಿಎಸ್‌ಟಿ ಮತ್ತು ಇಂಟಿಗ್ರೇಟೆಡ್ ಜಿಎಸ್‌ಟಿ ಕಾನೂನುಗಳಿಗೆ ತಿದ್ದುಪಡಿಗಳಿಗೆ ಕಳೆದ ತಿಂಗಳಷ್ಟೇ ಸಂಸತ್ತು ಅಂಗೀಕರಿಸಿತ್ತು. ಇದೀಗ ಈ ನಿಬಂಧನೆಗಳು ಅಕ್ಟೋಬರ್ 1ರಂದು ಅನುಷ್ಠಾನಕ್ಕೆ ಬರಲಿವೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಆಗಸ್ಟ್‌ನಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್​ ಸಭೆಯಲ್ಲೇ ಅಕ್ಟೋಬರ್ 1ರಿಂದ ಜಾರಿಗೆ ತರುವ ಬಗ್ಗೆ ನಿರ್ಧರಿಸಲಾಗಿತ್ತು. ಇದರ ಅನುಷ್ಠಾನದ ಪರಿಶೀಲನೆಯನ್ನು ಆರು ತಿಂಗಳ ನಂತರ ಎಂದರೆ 2024ರ ಏಪ್ರಿಲ್​ನಲ್ಲಿ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲೆ ಶೇ.28ರಷ್ಟು ಜಿಎಸ್​ಟಿ ವಿಧಿಸುವ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆನ್‌ಲೈನ್ ಗೇಮಿಂಗ್, ಕುದುರೆ ರೇಸಿಂಗ್‌ ಕ್ಯಾಸಿನೋಗಳ ಮೇಲೆ ಗರಿಷ್ಠ ತೆರಿಗೆ ವಿಧಿಸುವ ನಿರ್ಧಾರವು ಇದು ಉದ್ಯಮವನ್ನು ತುಳಿಯುವ ನಿರ್ಧಾರವಾಗಿರದೇ ಅದರ ನೈತಿಕತೆಯ ಮೇಲೆ ಉದ್ಭವಿಸಿದ ಪ್ರಶ್ನೆಯ ಆಧರಿಸಿದೆ. ಇಲ್ಲಿ ಜನರು ಬೆಟ್ಟಿಂಗ್​ ಆಡಿ ಸುಲಭವಾಗಿ ಹಣ ಗಳಿಕೆ ಮಾಡುತ್ತಾರೆ. ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ ಅಷ್ಟೇ ಎಂದು ಹೇಳಿದ್ದರು.

ಇದನ್ನೂ ಓದಿ:GST Council Meeting: ಕ್ಯಾನ್ಸರ್‌ ಔಷಧಿಗೆ ತೆರಿಗೆ ವಿನಾಯಿತಿ; ಆನ್​ಲೈನ್​ ಗೇಮಿಂಗ್​, ಕುದುರೆ ರೇಸಿಂಗ್​ ಮೇಲೆ ಶೇ.28ರಷ್ಟು ಜಿಎಸ್​ಟಿ

ABOUT THE AUTHOR

...view details