ಕರ್ನಾಟಕ

karnataka

By

Published : Oct 19, 2022, 3:13 PM IST

ETV Bharat / bharat

ಹೋಮ್ ಲೋನ್ ಬಡ್ಡಿ ಹೊರೆಯಾಗಿದ್ದರೆ ಹೀಗೆ ಮಾಡಿ.. ಭಾರ ಇಳಿಸಿಕೊಳ್ಳಿ!

ಕಡಿಮೆ ಅವಧಿಯಲ್ಲಿ ನಾಲ್ಕನೇ ಬಾರಿ ಬಡ್ಡಿದರ ಮತ್ತು ರೆಪೋ ದರ ಹೆಚ್ಚಳ ಮಾಡಲಾಗಿದೆ. ಸಾಲ ಮರು ಪಾವತಿಯ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಣದುಬ್ಬರ ಉದ್ದೇಶಿತ ಮಿತಿಯಾದ 6 ಪ್ರತಿಶತಕ್ಕಿಂತ ಹೆಚ್ಚುತ್ತಿದೆ, ಇದು ಬಡ್ಡಿದರಗಳಲ್ಲಿ ನಿರಂತರ ಹೆಚ್ಚಳ ಸೂಚಿಸುತ್ತದೆ. ಜನರು ಮುಂಚಿತವಾಗಿ ಯೋಜಿಸದಿದ್ದರೆ, ನಿವೃತ್ತಿ ನಂತರವೂ ಸಾಲ ಮರುಪಾವತಿಯ ಹೊರೆಯನ್ನು ಅವರು ಹೊರಬೇಕಾಗುತ್ತದೆ.

ಹೋಮ್ ಲೋನ್ ಬಡ್ಡಿ ಹೊರೆಯಾಗಿದ್ದರೆ ಹೀಗೆ ಮಾಡಿ.. ಭಾರ ಇಳಿಸಿಕೊಳ್ಳಿ
Finding interest rate on your home loan too unbearable? Here are tips to avoid it

ಹೈದರಾಬಾದ್: ದೀರ್ಘಾವಧಿಯ ಗೃಹ ಸಾಲಗಳ ಮೇಲಿನ ಬಡ್ಡಿದರದ ಹೊರೆ ಹೆಚ್ಚುತ್ತಿರುವ ಕಾರಣ, ಜನ ಇಎಂಐ ಮೊತ್ತ ಕಡಿಮೆ ಮಾಡುವುದು ಮತ್ತು ಸಾಲದ ಅವಧಿಯನ್ನು ಹೆಚ್ಚಿಸುವಂಥ ಅಲ್ಪಾವಧಿ ಪರಿಹಾರಗಳನ್ನು ಕಂಡುಕೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಆದರೆ, ಅಂಥ ಕ್ರಮಗಳಿಂದ ದೀರ್ಘಾವಧಿಯಲ್ಲಿ ನೀವು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಆದ್ದರಿಂದ ಹೀಗೆ ಮಾಡುವ ಬದಲು ಹಣಕಾಸು ಜವಾಬ್ದಾರಿಗಳನ್ನು ಮರು ಹೊಂದಿಸಬೇಕು. ಕಡಿಮೆ ಬಡ್ಡಿ ನೀಡುವ ಸಣ್ಣ ಉಳಿತಾಯ ಮತ್ತು ಠೇವಣಿಗಳನ್ನು ಅವಧಿಗಿಂತ ಮುಂಚಿತವಾಗಿ ಗೃಹ ಸಾಲ ಪಾವತಿಸಲು ಬಳಸಬೇಕು.

ನಾಲ್ಕನೇ ಬಾರಿ ಏರಿಕೆಯಾದ ಬಡ್ಡಿದರ:ಕಡಿಮೆ ಅವಧಿಯಲ್ಲಿ ನಾಲ್ಕನೇ ಬಾರಿ ಬಡ್ಡಿದರ ಮತ್ತು ರೆಪೊ ದರಗಳು ಹೆಚ್ಚಾಗಿದ್ದು, ಸಾಲ ಮರುಪಾವತಿ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಣದುಬ್ಬರ ಉದ್ದೇಶಿತ ಮಿತಿಯಾದ 6 ಪ್ರತಿಶತಕ್ಕಿಂತ ಹೆಚ್ಚುತ್ತಿದೆ, ಇದು ಬಡ್ಡಿ ದರಗಳಲ್ಲಿ ನಿರಂತರ ಹೆಚ್ಚಳವನ್ನು ಸೂಚಿಸುತ್ತದೆ. ಜನರು ಮುಂಚಿತವಾಗಿ ಯೋಜಿಸದಿದ್ದರೆ, ನಿವೃತ್ತಿ ನಂತರವೂ ಸಾಲ ಮರುಪಾವತಿಯ ಹೊರೆಯನ್ನು ಅವರು ಹೊರಬೇಕಾಗುತ್ತದೆ.

ಗೃಹ ಸಾಲ ಎಂದರೆ 15 ರಿಂದ 20 ವರ್ಷಗಳವರೆಗೆ ಪಾವತಿಸಬೇಕಾದಂತಹ ದೀರ್ಘಾವಧಿ ಬಡ್ಡಿಯ ಹೊರೆಯಾಗಿದೆ. ಈ ಅವಧಿಯಲ್ಲಿ ಬಡ್ಡಿದರಗಳು ಏರುತ್ತಿರುತ್ತವೆ ಮತ್ತು ಕಡಿಮೆಯಾಗುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳ ಕಾರಣದಿಂದಾಗಿ, EMI ಗಳು (ಸಮಾನ ಮಾಸಿಕ ಕಂತುಗಳು) ಹೊಸ ಸಾಲಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚಿನ ಹೊರೆಯಾಗುತ್ತಿವೆ.

ಅಸ್ತಿತ್ವದಲ್ಲಿರುವ ಸಾಲಗಳ ಅವಧಿಯು ತಿಂಗಳುಗಳ ಮತ್ತು ವರ್ಷಗಳ ಲೆಕ್ಕದಲ್ಲಿ ಹೆಚ್ಚುತ್ತಲೇ ಇರುತ್ತದೆ. ಮೂಲತಃ ನಿಗದಿತ ಅವಧಿಗೆ ಮುಂಚೆಯೇ ದೀರ್ಘಾವಧಿ ಸಾಲವನ್ನು ಕ್ಲೋಸ್ ಮಾಡುವುದು ಯಾವಾಗಲೂ ಉತ್ತಮ.

ಠೇವಣಿ ಮೊತ್ತ ಬಳಸಿ ಸಾಲ ತೀರಿಸಿ:ಸಾಮಾನ್ಯವಾಗಿ ಜನ ಇಎಂಐ ಮೇಲೆ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಲಗಳನ್ನು ತೆಗೆದುಕೊಳ್ಳುತ್ತಾರೆ. ಇದು ತಕ್ಷಣವೇ ಹೊರೆಯಾಗದಿರಬಹುದು. ಆದರೆ, ಬಡ್ಡಿದರಗಳು ಹೆಚ್ಚಾದಂತೆ ಒಟ್ಟಾರೆ ಮರುಪಾವತಿ ಬಹುಪಟ್ಟು ಹೆಚ್ಚಾಗುತ್ತದೆ. ಅಂತಹ ಯೋಜಿತವಲ್ಲದ ರೀತಿಯಲ್ಲಿ ಸಾಲಗಳನ್ನು ತೆಗೆದುಕೊಳ್ಳುವ ಬದಲು, ಒಬ್ಬರು ಮೊದಲು ತಮ್ಮ ಆರ್ಥಿಕ ಸ್ಥಿತಿಯ ಸ್ಪಷ್ಟ ಅಂದಾಜು ಪಡೆಯಬೇಕು. ಹೆಚ್ಚಿನ ಬಡ್ಡಿಯ ದೀರ್ಘಾವಧಿ ಸಾಲವನ್ನು ಕಡಿಮೆ ಬಡ್ಡಿಗೆ ಉಳಿತಾಯ ಯೋಜನೆಗಳಲ್ಲಿ ಠೇವಣಿ ಮಾಡಿದ ಮೊತ್ತವನ್ನು ಬಳಸಿ ತೀರಿಸಬೇಕು. ಆಗ ಮಾತ್ರ ಕನಿಷ್ಠ ಅಗತ್ಯ ಇರುವ ಮೊತ್ತಕ್ಕೆ ಗೃಹ ಸಾಲ ತೆಗೆದುಕೊಳ್ಳಬೇಕು.

ಕಡಿಮೆ ಬಡ್ಡಿಯ ಠೇವಣಿ ಇಡುವುದಕ್ಕಿಂತ ಸಾಲ ತೀರಿಸುವುದರತ್ತ ಗಮನ ಕೊಡಿ:ಈಗಿರುವಂತೆ ಎಲ್ಲ ಬ್ಯಾಂಕ್‌ಗಳ ಗೃಹ ಸಾಲಗಳ ಬಡ್ಡಿ ದರ ಸುಮಾರು 8 ರಿಂದ 9 ಪ್ರತಿಶತಕ್ಕೆ ಬಂದಿವೆ. ಆದರೆ, ಠೇವಣಿಗಳು ಮಾತ್ರ ಅಂಥ ದರಗಳನ್ನು ಎಲ್ಲಿಯೂ ನೀಡುತ್ತಿಲ್ಲ. ಆದ್ದರಿಂದ, ಕಡಿಮೆ ಬಡ್ಡಿಯನ್ನು ನೀಡುವ ಠೇವಣಿಗಳನ್ನು ಆಯ್ಕೆ ಮಾಡುವ ಬದಲು, ದೀರ್ಘಾವಧಿಯ ಸಾಲಗಳನ್ನು ತೀರಿಸಲು ಆ ಮೊತ್ತವನ್ನು ಬಳಸಬೇಕು.

ಉದಾಹರಣೆಗೆ, ನಿಮ್ಮ ಗೃಹ ಸಾಲದ ಬಡ್ಡಿಯು ಶೇಕಡಾ 8.55 ಮತ್ತು ಬ್ಯಾಂಕ್ ಸ್ಥಿರ ಠೇವಣಿಗಳು ಕೇವಲ 7 ಶೇಕಡಾದಷ್ಟು ನೀಡುತ್ತಿವೆ. ನಿಮ್ಮ ಆದಾಯವು ಶೇ 20ರ ತೆರಿಗೆ ಸ್ಲ್ಯಾಬ್​ನಲ್ಲಿ ಇದ್ದರೆ, ಠೇವಣಿಗಳ ವಾರ್ಷಿಕ ಲಾಭ ಕೇವಲ ಶೇ 5.6ರಷ್ಟು ಮಾತ್ರ. ಹಾಗಾಗಿ ಗೃಹ ಸಾಲವನ್ನು ತೀರಿಸುವುದು ಉತ್ತಮ. ಪ್ರತಿ ವರ್ಷ ಕನಿಷ್ಠ ನಾಲ್ಕು EMI ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ಅಥವಾ, ಮೂಲ ಮೊತ್ತದ 5 ರಿಂದ 10 ಪ್ರತಿಶತವನ್ನು ಪಾವತಿಸಬೇಕು.

ಬ್ಯಾಂಕ್​​ನಿಂದ ಬ್ಯಾಂಕ್​ಗೆ ಸಾಲ ವರ್ಗಾಯಿಸುವಾಗ ಜಾಗ್ರತೆ ಇರಲಿ:ಕಡಿಮೆ ಬಡ್ಡಿಯ ಲಾಭಕ್ಕಾಗಿ ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಸಾಲವನ್ನು ವರ್ಗಾಯಿಸುವಾಗ ಜಾಗರೂಕರಾಗಿರಬೇಕು. ಬಡ್ಡಿಯ ವ್ಯತ್ಯಾಸವು ಶೇಕಡಾ 0.5 ಮತ್ತು ಅದಕ್ಕಿಂತ ಹೆಚ್ಚಿನದಾಗಿರಬೇಕು. ಅಲ್ಲದೇ, ಪರಿಶೀಲನೆ ಮತ್ತು ಪ್ರೊಸೆಸಿಂಗ್​ಗಾಗಿ ಸಂಗ್ರಹಿಸಲಾದ ಶುಲ್ಕವನ್ನು ಪರಿಗಣಿಸಬೇಕು. ನಿಮ್ಮ ಕ್ರೆಡಿಟ್ ದರ ಮತ್ತು ಆದಾಯದಲ್ಲಿ ಏರಿಕೆ ಕಂಡು ಬಂದಲ್ಲಿ ಬಡ್ಡಿಯನ್ನು ಕಡಿಮೆ ಮಾಡುವ ಸಾಧ್ಯತೆಯ ಬಗ್ಗೆ ಬ್ಯಾಂಕ್‌ನೊಂದಿಗೆ ಚರ್ಚಿಸಿ.

ದೀರ್ಘಾವಧಿ ಸಾಲ ಇದ್ದರೆ ವೆಚ್ಚ ಕಡಿಮೆ ಮಾಡುವುದು ಒಳಿತು:ದೀರ್ಘಾವಧಿ ಗೃಹ ಸಾಲವನ್ನು ತೆಗೆದುಕೊಳ್ಳುವ ಮೊದಲು, ನಾವೆಲ್ಲರೂ ನಮ್ಮ ವೆಚ್ಚಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಲು ಪರಿಗಣಿಸಬೇಕು. ನಮ್ಮ ಎಲ್ಲ ಸಣ್ಣ ಉಳಿತಾಯವನ್ನು ಬ್ಯಾಂಕ್ ಸಾಲಗಳ ಮರುಪಾವತಿಗೆ ಉಪಯೋಗಿಸಬೇಕು.

EMI ಹೊರೆ ಹೆಚ್ಚಿದ್ದರೆ, ಬ್ಯಾಂಕ್‌ಗಳೊಂದಿಗೆ ಚರ್ಚಿಸಿ ಮತ್ತು ಇನ್ನೊಂದು ಬ್ಯಾಂಕ್ ಸ್ವಲ್ಪ ಕಡಿಮೆ ಬಡ್ಡಿದರ ನೀಡಿದರೆ ಸಾಲ ವರ್ಗಾಯಿಸಿ. ಬಡ್ಡಿದರಗಳಲ್ಲಿ ಭವಿಷ್ಯದ ಏರಿಕೆಯನ್ನು ಪರಿಗಣಿಸಿ ಮತ್ತು EMI ಮೊತ್ತದ 10 ರಿಂದ 15 ಪ್ರತಿಶತವನ್ನು ಅಲ್ಪಾವಧಿಯ ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಿ. ಮೂರರಿಂದ ಆರು ತಿಂಗಳ ಅವಧಿಯ ವೆಚ್ಚಗಳು ಮತ್ತು EMI ಗಳಿಗೆ ಸಮಾನವಾದ ಮೊತ್ತಕ್ಕೆ ಆಕಸ್ಮಿಕ ನಿಧಿಯನ್ನು ಸಿದ್ಧಗೊಳಿಸಿ ಇಟ್ಟುಕೊಳ್ಳುವುದು ಉತ್ತಮ.

ಇದನ್ನು ಓದಿ:ಕುಟುಂಬ ಆರೋಗ್ಯ ರಕ್ಷಣೆಗಿರಲಿ ಒಂದಕ್ಕಿಂತ ಹೆಚ್ಚು ಹೆಲ್ತ್​ ಇನ್ಸೂರೆನ್ಸ್​ ಪಾಲಿಸಿ..

ABOUT THE AUTHOR

...view details