ಕರ್ನಾಟಕ

karnataka

ETV Bharat / bharat

ಪಂಚಾಯಿತಿಗಳಿಗೆ 8,923.8 ಕೋಟಿ ರೂ. ಬಿಡುಗಡೆ; ಕರ್ನಾಟಕದ ಪಾಲೆಷ್ಟು..? - Finance Ministry

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಜೂನ್​ 1 ರಂದು ಮೊದಲ ಅನುದಾನ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್​​ ಪರಿಸ್ಥಿತಿ ಮನದಲ್ಲಿಟ್ಟುಕೊಂಡು ಹಾಗೂ ಪಂಚಾಯತ್ ರಾಜ್ ಸಚಿವಾಲಯದ ಶಿಫಾರಸಿನ ಮೇರೆಗೆ ಮುಂಗಡವಾಗಿ ಹಣ ಬಿಡುಗಡೆ ಮಾಡಲಾಗಿದೆ.

ಹಣಕಾಸು ಸಚಿವಾಲಯ
ಹಣಕಾಸು ಸಚಿವಾಲಯ

By

Published : May 9, 2021, 3:44 PM IST

ನವದೆಹಲಿ: ಕೋವಿಡ್ ನಿರ್ವಹಣೆಯ ಸಂಬಂಧ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಪರಿಹಾರ ಕ್ರಮವಾಗಿ ಪಂಚಾಯತ್​​ಗಳಿಗೆ 8,923.8 ಕೋಟಿ ರೂ ಬಿಡುಗಡೆ ಮಾಡಿದೆ.

25 ರಾಜ್ಯದ ಪಂಚಾಯತ್​​ಗಳಿಗೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ. 2020-21ನೇ ಸಾಲಿನ ಯುನೈಟೆಡ್ ಗ್ರ್ಯಾಂಟ್​ನ ಮೊದಲ ಕಂತಿನ ಭಾಗವಾಗಿ ಈ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮೂರು ಹಂತದ ಪಂಚಾಯತ್ ಭಾಗಗಳಾದ ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಪಂಚಾಯತ್​​ಗಳಿಗೆ ಸಮನಾಗಿ ಹಂಚಿಕೆಯಾಗಲಿದೆ.

25 ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಅತೀ ಹೆಚ್ಚು ಅನುದಾನ ಪಡೆದಿದೆ (1,441.6 ಕೋಟಿ) ಇದರ ನಂತರ ಮಹಾರಾಷ್ಟ್ರ (861.4 ಕೋಟಿ) ಪಡೆದರೆ ಸಿಕ್ಕಿಂ ಅತೀ ಕಡಿಮೆ (6.2 ಕೋಟಿ) ಪಡೆದಿದೆ. ಇತ್ತ ಕರ್ನಾಟಕಕ್ಕೆ 475.4 ಕೋಟಿ ರೂಪಾಯಿ ಅನುದಾನವಾಗಿ ದೊರಕಿದೆ.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಜೂನ್​1 ರಂದು ಮೊದಲ ಅನುದಾನ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್​​ ಪರಿಸ್ಥಿತಿ ಮನದಲ್ಲಿಟ್ಟುಕೊಂಡು ಹಾಗೂ ಪಂಚಾಯತ್ ರಾಜ್ ಸಚಿವಾಲಯದ ಶಿಫಾರಸಿನ ಮೇರೆಗೆ ಮುಂಗಡವಾಗಿ ಹಣ ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details