ಕರ್ನಾಟಕ

karnataka

ETV Bharat / bharat

ರಸ್ತೆ ಬದಿಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ - ಸ್ಥಳೀಯ ತರಕಾರಿ ಮಾರುಕಟ್ಟೆ

ಚೆನ್ನೈನ ಮೈಲಾಪುರದ ಸ್ಥಳೀಯ ತರಕಾರಿ ಮಾರುಕಟ್ಟೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿರುವ ವಿಡಿಯೋ ವೈರಲ್​ ಆಗಿದೆ.

finance-minister-nirmala-sitharamans-visit-to-mylapore-market-in-chennai
ರಸ್ತೆ ಬದಿಯ ಮಾರುಕಟ್ಟೆಯಲ್ಲಿ ತರಕಾರಿ ಖರೀಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

By

Published : Oct 9, 2022, 4:52 PM IST

ಚೆನ್ನೈ (ತಮಿಳುನಾಡು):ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೆನ್ನೈನಲ್ಲಿ ತರಕಾರಿ ಮಾರುಕಟ್ಟೆಗೆ ತೆರಳಿ ವ್ಯಾಪಾರಿಗಳನ್ನು ಮಾತನಾಡಿಸಿ, ತರಕಾರಿ ಖರೀದಿ ಮಾಡಿದ್ದಾರೆ. ಇದರ ವಿಡಿಯೋ ಮತ್ತು ಫೋಟೋಗಳನ್ನೂ ಖುದ್ದು ಸಚಿವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಚೆನ್ನೈನ ಮೈಲಾಪುರದ ಸ್ಥಳೀಯ ರಸ್ತೆ ಬದಿಯ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿರುವ ಬಗ್ಗೆ ಶನಿವಾರ ಸಂಜೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಶೇರ್​ ಮಾಡಲಾಗಿದೆ.

ಚೆನ್ನೈಗೆ ಭೇಟಿ ನೀಡಿರುವ ನಿರ್ಮಲಾ ಸೀತಾರಾಮನ್ ಮೈಲಾಪುರ ಮಾರುಕಟ್ಟೆಗೆ ತೆರಳಿ ಅಲ್ಲಿ ಮಾರಾಟಗಾರರು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದರು. ತರಕಾರಿಗಳನ್ನೂ ಖರೀದಿಸಿದರು ಎಂದು ಟ್ವೀಟ್​ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಚಿವರು ಸಿಹಿ ಗೆಣಸು ಮತ್ತು ಹಾಗಲಕಾಯಿ ಆಯ್ದುಕೊಂಡು ತೂಕ ಮಾಡಿಸಿ ಖರೀದಿಸಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ:ಪುಟ್ಟ ಮಗುವಿನಂತೆ ಹೆತ್ತ ತಾಯಿ ಹೊತ್ತು ದೇವಿ ದರ್ಶನ ಮಾಡಿಸಿದ ಮಗ

ABOUT THE AUTHOR

...view details