ಕರ್ನಾಟಕ

karnataka

ETV Bharat / bharat

ಹೈದರ್​ಪೋರಾ ಎನ್​ಕೌಂಟರ್​: ಪ್ರತಿಭಟನೆಗೆ ಮಣಿದ ಸರ್ಕಾರ.. ಭಟ್​, ಗುಲ್​ ಮೃತದೇಹ ಹಸ್ತಾಂತರಿಸಿದ ಪೊಲೀಸ್​ ಇಲಾಖೆ - ಹಂದ್ವಾರದಲ್ಲಿರುವ ಸ್ಮಶಾನದಿಂದ ಹೊರತೆಗೆದ ಮೃತದೇಹಗಳು

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಶ್ರೀನಗರದ ಹೈದರ್‌ಪೋರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ (Hyderpora Encounter) ಪ್ರಾಣಬಿಟ್ಟ ಇಬ್ಬರ ಮೃತದೇಹಗಳನ್ನು (exhumed from a graveyard in Handwara) ಗುರುವಾರ ಸಂಜೆ ಹೊರ ತೆಗೆದು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

Hyderpora Encounter  Hyderpora Encounter news  Hyderpora Encounter updated  exhumed from a graveyard in Handwara  Muhammad Altaf Bhat  Mudasir Gul  Muhammad Altaf Bhat and Mudasir Gul laid to rest  Jammu and Kashmir  ಜಮ್ಮು ಮತ್ತು ಕಾಶ್ಮೀರ  ಹೈದರ್‌ಪೋರಾ ಎನ್​ಕೌಂಟರ್​ ಮುಹಮ್ಮದ್ ಅಲ್ತಾಫ್ ಭಟ್  ಮುದಾಸಿರ್ ಗುಲ್  ಹಂದ್ವಾರದಲ್ಲಿರುವ ಸ್ಮಶಾನದಿಂದ ಹೊರತೆಗೆದ ಮೃತದೇಹಗಳು  ಭಟ್​ ಮತ್ತು ಗುಲ್​ ಮೃತದೇಹಗಳು ಕುಟುಂಬಕ್ಕೆ ಹಸ್ತಾಂತರಿ
ಭಟ್​, ಗುಲ್​ ಮೃತದೇಹ ಹಸ್ತಾಂತರಿಸಿದ ಪೊಲೀಸ್​ ಇಲಾಖೆ

By

Published : Nov 19, 2021, 9:33 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಹೈದರ್‌ಪೋರಾ ಗುಂಡಿನ ಚಕಮಕಿಯಲ್ಲಿ (Hyderpora Encounter) ಹತರಾದ ಬರ್ಜುಲ್ಲಾದ ಮುಹಮ್ಮದ್ ಅಲ್ತಾಫ್ ಭಟ್ (Muhammad Altaf Bhat) ಮತ್ತು ಶ್ರೀನಗರದ ರಾವಲ್‌ಪೋರಾ ಪ್ರದೇಶದ ಮುದಾಸಿರ್ ಗುಲ್ (Mudasir Gul) ಅವರ ಶವಗಳನ್ನು ಹಂದ್ವಾರದಲ್ಲಿರುವ ಸ್ಮಶಾನದಿಂದ ಹೊರತೆಗೆದು (exhumed from a graveyard in Handwara) ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಏನಿದು ಘಟನೆ: ನವೆಂಬರ್​ 15 ರಂದು ಹೈದರ್​ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ದಾಳಿ ನಡೆದಿತ್ತು. ಕಟ್ಟಡವೊಂದರಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಬಂದ ನಂತರ ಭದ್ರತಾ ಪಡೆಗಳು ಸ್ಥಳಕ್ಕೆ ತೆರಳಿ ಎನ್​ಕೌಂಟರ್ ​ ನಡೆಸಿದ್ದರು.

ಹೈದರ್‌ಪೋರಾ ಗುಂಡಿನ ಚಕಮಕಿಯಲ್ಲಿ (Hyderpora Encounter) ವಿದೇಶಿ ಉಗ್ರ ಹೈದರ್ ಮತ್ತು ಆತನ ಸ್ಥಳೀಯ ಸಹಾಯಕ ಅಮೀರ್ ಮಗ್ರೆ ಮತ್ತು ಮುಹಮ್ಮದ್ ಅಲ್ತಾಫ್ ಭಟ್ ಮತ್ತು ಮುದಾಸಿರ್ ಗುಲ್​ ಅವರನ್ನು ಹತ್ಯೆ ಮಾಡಲಾಗಿತ್ತು. ನಾಲ್ವರನ್ನು ಉತ್ತರ ಕಾಶ್ಮೀರದ ಹಂದ್ವಾರ ಪ್ರದೇಶದಲ್ಲಿ ಸಮಾಧಿ ಮಾಡಲಾಗಿತ್ತು.

ಕುಟುಂಬಸ್ಥರ ಆರೋಪ:ಹೈದರ್‌ಪೋರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ (Hyderpora Encounter) ಮೃತಪಟ್ಟ ಅಲ್ತಾಫ್ ಭಟ್ ಮತ್ತು ಮುದಾಸಿರ್ ಗುಲ್ ಮೃತದೇಹವನ್ನು ಕುಟುಂಬ ಸದಸ್ಯರಿಗೆ ನೀಡುವುದಕ್ಕೆ ಪೊಲೀಸರು ನಿರಾಕರಿಸಿದ್ದರು. ಪೊಲೀಸ್ ಎನ್‌ಕೌಂಟರ್‌ನ ಮೂಲಕ ಇಬ್ಬರನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದರು.

ಓದಿ:ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ: ಇಂದು ಜಿಲ್ಲಾಡಳಿತಗಳ ಜೊತೆ ಸಿಎಂ ಸಭೆ

ಪ್ರತಿಭಟನೆ:ಹೈದರಾಪೊರಾ ಎನ್​ಕೌಂಟರ್ (Hyderpora Encounter) ವಿರುದ್ಧ ಜಮ್ಮುವಿನಲ್ಲಿ ಸಾವನ್ನಪ್ಪಿದ ಇಬ್ಬರು ಕುಟುಂಬಸ್ಥರು ಸೇರಿದಂತೆ ಪ್ರತಿಭಟನಾಕಾರರು ಮತ್ತು ಮಾಜಿ ಸಿಎಂ ಶ್ರೀನಗರದ ಪ್ರೆಸ್ ಕಾಲೋನಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ಮೃತ ನಾಗರಿಕರಿಗೆ ನ್ಯಾಯ ಒದಗಿಸಬೇಕು ಮತ್ತು ಮೃತರ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದ್ದರು.

ಪೊಲೀಸರ ಹೇಳಿಕೆ:ಪ್ರತಿಭಟನೆ ಕೈಗೊಳ್ಳುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪ್ರತಿಭಟನೆಯಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ನಾವು ಶವಗಳನ್ನು ಹಿಂತಿರುಗಿಸುತ್ತೇವೆ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದರು. ಆದರೂ ಅವರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದರು. ಈ ಹಿನ್ನೆಲೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಲಾಗಿದೆ. ಈಗ ಅವರು ತಮ್ಮ ನಿವಾಸಗಳಲ್ಲಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದರು.

ಮೃತದೇಹ ಹಸ್ತಾಂತರ:ಪೊಲೀಸರು ಮತ್ತು ಆಡಳಿತದ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಅಲ್ತಾಫ್ ಮತ್ತು ಮುದಾಸಿರ್ ಅವರ ಶವಗಳನ್ನು ಬಿಗಿ ಭದ್ರತೆಯ ನಡುವೆ ಹಂದ್ವಾರದಲ್ಲಿರುವ ಸ್ಮಶಾನದಿಂದ ಸಂಜೆ 5.30ಕ್ಕೆ ಹೊರ ತೆಗೆಯಲಾಯಿತು (exhumed from a graveyard in Handwara). ಕಾನೂನು ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಅವರಿಬ್ಬರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು (handed over to the families).

ಓದಿ:580 ವರ್ಷಗಳ ನಂತರ ಇಂದು ಸಂಭವಿಸಲಿದೆ ದೀರ್ಘಾವಧಿಯ ಚಂದ್ರಗ್ರಹಣ

ಮುಗಿಲು ಮುಟ್ಟಿದ ಆಕ್ರಂದನ: ಮೃತದೇಹಗಳನ್ನು ನೋಡಿದ ತಕ್ಷಣ ಎರಡು ಕುಟುಂಬಗಳಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಂಡು ಬಂದವು. ಭಟ್ ಅವರ ಮಕ್ಕಳು ತಮ್ಮ- ತಂದೆ ಕೊನೆಯ ಬಾರಿಗೆ ನೋಡಿದ ನಂತರ ಆಕ್ರಂದನ ಮುಗಿಲು ಮುಟ್ಟಿತ್ತು. ಅದೇ ರೀತಿ ಮುದಾಸಿರ್​ನನ್ನು ಕೊನೆಯ ಬಾರಿ ನೋಡಿದ ಅವರ ಪತ್ನಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತದೇಹಗಳ ಅಂತ್ಯಕ್ರಿಯೆ:ಭಟ್​ರನ್ನು ಬರ್ಜುಲ್ಲಾದಲ್ಲಿರುವ ಅವರ ಪೂರ್ವಜರ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಗುಲ್​ರನ್ನು ಪರ್ರೆಪೋರಾದ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.

ನ್ಯಾಯಾಂಗ ತನಿಖೆ:ತೀವ್ರ ಚರ್ಚೆಗಳ ನಂತರಶ್ರೀನಗರದ ಹೈದರ್‌ಪೋರಾದಲ್ಲಿ ನಡೆದ ಎನ್‌ಕೌಂಟರ್‌ನ (Hyderpora Encounter) ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ರಾಜಕೀಯ ಪಕ್ಷಗಳು ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಹತ್ಯೆಗಳ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದರು. ಶ್ರೀನಗರದ ಡೆಪ್ಯುಟಿ ಕಮಿಷನರ್ ಮುಹಮ್ಮದ್ ಐಜಾಜ್ ಅಸದ್ ಅವರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಖುರ್ಷಿದ್ ಅಹ್ಮದ್ ಶಾ ಅವರನ್ನು ವಿಚಾರಣಾ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು.

ABOUT THE AUTHOR

...view details