ದೆಹಲಿ: ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಇಂದು ದೆಹಲಿ ಹೈಕೋರ್ಟ್‌ಗೆ ಹಾಜರಾಗಿದ್ದು, ನ್ಯಾಯಾಧೀಶರ ವಿರುದ್ಧದ ಕ್ರಿಮಿನಲ್ ನಿಂದನೆ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಕ್ಷಮಾಪಣೆ ಸ್ವೀಕರಿಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ವಿಕಾಸ್ ಮಹಾಜನ್ ಅವರಿದ್ದ ಪೀಠವು ಅಗ್ನಿಹೋತ್ರಿ ಅವರನ್ನು ಅವಹೇಳನ ಆರೋಪದಿಂದ ಬಿಡುಗಡೆ ಮಾಡಿದೆ. ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆಯಿಂದ ಇರುವಂತೆ ಕಿವಿಮಾತು ಹೇಳಿದೆ.
ಹೈಕೋರ್ಟ್ ಅಗ್ನಿಹೋತ್ರಿಗೆ ನೀಡಲಾದ ಕ್ರಿಮಿನಲ್ ನಿಂದನೆ ನೋಟಿಸ್ ಹಿಂಪಡೆದಿದೆ. ಅವರು ಸಲ್ಲಿಸಿರುವ ಅಫಿಡವಿಟ್ ಕೂಡ ಬೇಷರತ್ತಾಗಿ ವ್ಯಕ್ತಪಡಿಸಿದ ವಿಷಾದ ಮತ್ತು ಪಶ್ಚಾತ್ತಾಪವನ್ನು ಪ್ರತಿಬಿಂಬಿಸುತ್ತದೆ ಎಂದು ಕೋರ್ಟ್ ಗಮನಿಸಿತು.
ಇದನ್ನೂ ಓದಿ:ದಿ ಕಾಶ್ಮೀರ್ ಫೈಲ್ಸ್: ಚಿತ್ರೀಕರಣದ ವೇಳೆ ನಿರ್ದೇಶಕರು ಅತ್ತಿದ್ದೇಕೆ.?
ವಿವೇಕ್ ಅಗ್ನಿಹೋತ್ರಿ ಅವರು ನ್ಯಾಯಾಂಗದ ಸಂಸ್ಥೆಯ ಬಗ್ಗೆ ಅತ್ಯಂತ ಗೌರವಭಾವ ಹೊಂದಿದ್ದಾರೆ. ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಘನತೆಗೆ ಧಕ್ಕೆ ತರಲು ಉದ್ದೇಶಿಸಿಲ್ಲ ಎಂಬುದನ್ನು ಪರಿಗಣಿಸಿ ನೋಟಿಸ್ ಹಿಂಪಡೆಯಲಾಗಿದೆ. ಹೀಗಾಗಿ, ಅವರನ್ನು ಅವಹೇಳನ ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.