ಹೈದರಾಬಾದ್ :ತೆಲಂಗಾಣದ ರಾಜಧಾನಿ ಹೈದರಾಬಾದ್ನ ಟ್ಯಾಂಕ್ ಬಂಡ್ ಒಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಅಥವಾ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ವ್ಯಕ್ತಿಗಳ ಶವಗಳನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಆ್ಯಂಬುಲೆನ್ಸ್ಗೆ ಬಹುಭಾಷಾ ನಟ ಸೋನು ಸೂದ್ ಚಾಲನೆ ನೀಡಿದ್ದಾರೆ.
ಶವಾಲ (ಮೃತದೇಹಗಳ) ಶಿವ ಎಂಬಾತನ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ್ದು, ಆತ ಶವಗಳನ್ನು ಹೊರತೆಗೆದಾಗ ಜನರು ನೀಡುತ್ತಿದ್ದ ಹಣವನ್ನು ಖರ್ಚು ಮಾಡದೇ ಆ ಹಣದಿಂದ ಆ್ಯಂಬುಲೆನ್ಸ್ ಖರೀದಿಸಿದ್ದಾನೆ.