ಕರ್ನಾಟಕ

karnataka

ETV Bharat / bharat

ಬಿಜೆಪಿ ಸಂಸದ ಸನ್ನಿ ಡಿಯೋಲ್​ಗೆ ಕೊರೊನಾ ಸೋಂಕು - ಗುರುದಾಸ್‌ಪುರದ ಬಿಜೆಪಿ ಸಂಸದನಿಗೆ ಕೊರೊನಾ ಪಾಸಿಟಿವ್​

ಬಾಲಿವುಡ್​ ನಟ ಹಾಗೂ ಸಂಸದ ಸನ್ನಿ ಡಿಯೋಲ್​ಗೆ ಕೊರೊನಾ ಸೋಂಕು ತಗುಲಿದೆ. ಮಂಗಳವಾರ ಮುಂಬೈಗೆ ಹಿಂದಿರುಗುವ ಮೊದಲು ಅವರು ಕೋವಿಡ್​​ ಟೆಸ್ಟ್​ ಮಾಡಿಸಿದ್ದರು. ಈ ವೇಳೆ ರಿಪೋರ್ಟ್​ ಪಾಸಿಟಿವ್​ ಬಂದಿದ್ದು, ಡಿಯೋಲ್​ ಸ್ವಯಂ ಹೋಂ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

film actor and bjp mp sunny deol found corona positive
ಸನ್ನಿ ಡಿಯೋಲ್​ಗೆ ಕೊರೊನಾ ಸೋಂಕು

By

Published : Dec 2, 2020, 9:48 AM IST

ಮನಾಲಿ/ಹಿಮಾಚಲ ಪ್ರದೇಶ:ಬಾಲಿವುಡ್ ನಟ ಮತ್ತು ಗುರುದಾಸ್‌ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ಕೊರೊನಾ ಪಾಸಿಟಿವ್​ ವಕ್ಕರಿಸಿದೆ ಎಂದು ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯದರ್ಶಿ ಮಂಗಳವಾರ ಹೇಳಿದ್ದಾರೆ.

ಡಿಯೋಲ್ ಕೆಲವು ದಿನಗಳಿಂದ ಕುಲ್ಲು ಜಿಲ್ಲೆಯಲ್ಲಿದ್ದರು ಎಂದು ಆರೋಗ್ಯ ಕಾರ್ಯದರ್ಶಿ ಅಮಿತಾಭ್ ಅವಸ್ಥಿ ತಿಳಿಸಿದ್ದಾರೆ. ವೈದ್ಯರ ಸಲಹೆಯ ನಂತರ, ಸನ್ನಿ ಡಿಯೋಲ್​ ಶಿಮ್ಲಾದಲ್ಲಿ ತಾವೇ ಸ್ವಯಂ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

64 ವರ್ಷದ ಈ ಬಾಲಿವುಡ್ ನಟ ಡಿಯೋಲ್​ ಮುಂಬೈಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕುಲು ಜಿಲ್ಲೆಯ ಮನಾಲಿ ಬಳಿಯ ತಮ್ಮ ತೋಟದ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು.

ABOUT THE AUTHOR

...view details