ಅಯೋಧ್ಯೆ (ಉತ್ತರ ಪ್ರದೇಶ):ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೋಮವಾರ ರಾಮ ಜನ್ಮಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಾಲಯದ ಬುನಾದಿ ಕೆಲಸ ಶುರು ಮಾಡಿದೆ.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಇತರ ಸದಸ್ಯರು ಧಾರ್ಮಿಕ ಆಚರಣೆಗಳನ್ನು ಪೂರೈಸಿದರು. ನಂತರ ಅಡಿಪಾಯ ಕೆಲಸ ಪ್ರಾರಂಭಿಸಲಾಯಿತು.
ಈ ವರ್ಷದ ಆಗಸ್ಟ್ ವೇಳೆಗೆ ಸುಮಾರು 40 ಅಡಿ ಆಳದ ಅಡಿಪಾಯವನ್ನು ಭರ್ತಿ ಮಾಡಲಾಗುವುದು. ಈ ಬಗ್ಗೆ ಹೈದರಾಬಾದ್ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ತಾಂತ್ರಿಕ ಸಮೀಕ್ಷೆ ನಡೆಸಿದೆ. ದೇಗುಲದ ಅಡಿಪಾಯದ ಸ್ಥಳದಲ್ಲಿ 12 ಅಡಿ ಅವಶೇಷಗಳಿರುವ ಬಗ್ಗೆ ನಮಗೆ ತಿಳಿಸಿದ್ದಾರೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದರು.