ಕರ್ನಾಟಕ

karnataka

ETV Bharat / bharat

ಲೂಡೋಗಾಗಿ ರೈಲಿನಲ್ಲೇ ಲಡಾಯಿ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ - ಮುಂಬೈ ರೈಲಿನಲ್ಲಿ ಗಲಾಟೆ

ಭಾಯಂದರ್‌ನಿಂದ ಚರ್ಚ್‌ಗೇಟ್‌ಗೆ ತೆರಳುವ ಸ್ಥಳೀಯ ರೈಲಿನಲ್ಲಿ ಲೂಡೋ ಗೇಮ್ ವಿಚಾರವಾಗಿ ಇಬ್ಬರ ನಡುವೆ ಮಾರಾಮಾರಿ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

fight over Ludo game
ಲೂಡೋ ಗೇಮ್​ನಿಂದ ಗಲಾಟೆ

By

Published : Feb 23, 2022, 7:16 PM IST

ಮುಂಬೈ (ಮಹಾರಾಷ್ಟ್ರ):ಕೆಲ ಮೊಬೈಲ್​​ ಗೇಮ್​ಗಳಿಂದ ಆಗುವ ಅನಾಹುತಗಳು ಒಂದೆರಡಲ್ಲ. ಪ್ರಸ್ತುತ ಜಗತ್ತಿನಲ್ಲಿ ಮೊಬೈಲ್​​ ಗೇಮ್​​ ಗೀಳಿನಿಂದಾಗಿ, ಪರಸ್ಪರ ಗಲಾಟೆ ಮಾಡಿಕೊಳ್ಳುವ ವಿಚಾರಗಳನ್ನು ನಾವು ಕೇಳಿರುತ್ತೇವೆ. ಅದೇ ರೀತಿ ಮುಂಬೈನಲ್ಲೂ ಒಂದು ಘಟನೆ ಬೆಳಕಿಗೆ ಬಂದಿದೆ.

ರೈಲಿನಲ್ಲಿ ಮಾರಾಮಾರಿ - ವೈರಲ್ ವಿಡಿಯೋ

ಭಾಯಂದರ್‌ನಿಂದ ಚರ್ಚ್‌ ಗೇಟ್‌ಗೆ ತೆರಳುವ ಸ್ಥಳೀಯ ರೈಲಿನಲ್ಲಿ ಲೂಡೋ ಗೇಮ್ ವಿಚಾರವಾಗಿ ಇಬ್ಬರ ನಡುವೆ ಮಾರಾಮಾರಿ ನಡೆದಿದೆ.

ಇದನ್ನೂ ಓದಿ:ಗಂಗೂಬಾಯಿ ಕಥಿಯಾವಾಡಿ ಚಿತ್ರದ ವಿರುದ್ಧದ 2 ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಟ್ರೈನ್​ನಲ್ಲಿ ಇಬ್ಬರು ಲೂಡೋ ಗೇಮ್ ಆಡಿದ​ ನಂತರ ಗಲಾಟೆ ಮಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಾರಾಮಾರಿಯಲ್ಲಿ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆ ಕುರಿತು ದಹಿಸರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details