ಕರ್ನಾಟಕ

karnataka

ETV Bharat / bharat

ಪಬ್​ನಲ್ಲಿ ಮೊಬೈಲ್​​ ನಂಬರ್​ ಕೊಡದ ಯುವತಿಗೆ ಅತ್ಯಾಚಾರ ಬೆದರಿಕೆ - ಹೈದರಾಬಾದ್​​ನ ಪಬ್​ನಲ್ಲಿ ಗಲಾಟೆ

ಪಬ್​ಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಹೋಗಿದ್ದ ಯುವತಿಗೆ ಮತ್ತೊಂದು ಗುಂಪಿನ ಯುವಕನೋರ್ವ ಆಕೆಯ ಮೊಬೈಲ್​​ ನಂಬರ್​ ಕೇಳಿದ್ದ ಎನ್ನಲಾಗುತ್ತಿದೆ.

fight between two groups in a pub in hyderabad
ಪಬ್​ನಲ್ಲಿ ಮೊಬೈಲ್​​ ನಂಬರ್​ ಕೊಡದ ಯುವತಿಗೆ ಅತ್ಯಾಚಾರ ಬೆದರಿಕೆ

By

Published : Jun 21, 2022, 9:36 PM IST

ಹೈದರಾಬಾದ್​ (ತೆಲಂಗಾಣ): ಹೈದರಾಬಾದ್​​ನ ಪಬ್​ವೊಂದರಲ್ಲಿ ಎರಡು ಗಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಈ ವೇಳೆ ಎದುರಾಳಿ ಯುವಕರು ಫೋನ್​ ನಂಬರ್​​ ಕೊಡದ ಯುವತಿಗೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಜೂನ್​ 18ರಂದು ವಿಶ್ವಸಂಸ್ಥೆಯ ಮಂಡಳಿವೊಂದಲ್ಲಿ ಉದ್ಯೋಗಿಯಾದ ಮಹಿಳೆಯೊಬ್ಬರು ತನ್ನ ಸ್ನೇಹಿತರಾದ ಬಾಕ್ಸರ್​ ವಿಕ್ರಂ ಮತ್ತು ವಿಷ್ಣು ಎಂಬುವವರೊಂದಿಗೆ ಹೈಟೆಕ್​ ಸಿಟಿಯ ಫೈವ್​ ಸ್ಟಾರ್​​ನಲ್ಲಿರುವ ಪಬ್​ಗೆ ಹೋಗಿದ್ದರು. ಈ ವೇಳೆ ಎದುರಾಳಿ ಗುಂಪಿನ ಮಯಾಂಕ್​ ಅಗರ್ವಾಲ್, ಅಬ್ರರ್​, ಆರಿಫುದ್ದೀನ್​ ಹಾಗೂ ಖಾದರ್​ ಸೇರಿ ಎಂಟು ಜನರು ಪಬ್​ಗೆ ಬಂದಿದ್ದರು.

ಎಂಟು ಜನರ ಗಂಪಿನಲ್ಲಿದ್ದ ಯುವಕನೋರ್ವ ನನ್ನ ಬಳಿ ಬಂದು ಮೊಬೈಲ್​​ ನಂಬರ್​ ಕೇಳಿದ. ನಾನು ನಂಬರ್​ ಕೊಡಲು ಒಪ್ಪದೇ ಇದ್ದಾಗ ಆತ ಅತ್ಯಾಚಾರ ಬೆದರಿಕೆ ಹಾಕಿದ. ಆಗ ನನ್ನ ಜೊತೆಗಿದ್ದ ಒಬ್ಬ ಸ್ನೇಹಿತ ಮಧ್ಯಪ್ರವೇಶಿಸಿದ. ಇದು ಎರಡೂ ಗುಂಪುಗಳ ಗಲಾಟೆಗೆ ಕಾರಣವಾಗಿ, ನನ್ನ ಸ್ನೇಹಿತರ ಮೇಲೆ ಬಾಟಲ್​ಗಳಿಂದಲೂ ದಾಳಿ ಮಾಡಲಾಗಿದೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತ, ಈ ದೂರಿಗೆ ಪ್ರತಿಯಾಗಿ ಎದುರಾಳಿ ಗುಂಪಿನ ಯುವಕರು ಕೂಡ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ಕಡೆಯ ದೂರುಗಳನ್ನು ಸ್ವೀಕರಿಸಿರುವ ರಾಯದುರ್ಗಂ ಪೊಲೀಸರು ಘಟನೆಯ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಆತ್ಮಹತ್ಯೆಗೆ ಯತ್ನಿಸಿದ ವಸತಿ ಶಾಲಾ ವಾರ್ಡನ್, ಪಾರು ಮಾಡಿದ ಸಿಬ್ಬಂದಿ

ABOUT THE AUTHOR

...view details