ಪುರಿ(ಒಡಿಶಾ):ಕತಾರ್‌ನಲ್ಲಿ 22ನೇ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಉದ್ಘಾಟನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಒಡಿಶಾದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಇಲ್ಲಿನ ಪುರಿ ಬೀಚ್‌ನಲ್ಲಿ 8 ಅಡಿ ಎತ್ತರದ ಆಕರ್ಷಕ ಮರಳು ಕಲೆಯನ್ನು ರಚಿಸಿ ಫುಟ್‌ಬಾಲ್ ಟೂರ್ನಿಯ ಯಶಸ್ಸಿಗೆ ಶುಭಾಶಯ ತಿಳಿಸಿದ್ದಾರೆ.
1350 ನಾಣ್ಯ, 5 ಟನ್ ಮರಳು..: ಫಿಫಾ ಟೂರ್ನಿಗೆ ಸುದರ್ಶನ್ ಪಟ್ನಾಯಕ್ ಶುಭಾಶಯ - ಫಿಫಾ ವಿಶ್ವಕಪ್
ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸುತ್ತಿರುವ ಎಲ್ಲಾ ದೇಶಗಳ 1,350 ನಾಣ್ಯಗಳನ್ನು ಬಳಸಿ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ವಿಶೇಷ ರೀತಿಯಲ್ಲಿ ಟೂರ್ನಿಗೆ ಶುಭ ಕೋರಿದ್ದಾರೆ.
ಸುದರ್ಶನ್ ಅವರು ಫುಟ್‌ಬಾಲ್ ಮತ್ತು ಫಿಫಾ ವಿಶ್ವಕಪ್ ಟ್ರೋಫಿಯ ಕಲಾಕೃತಿಯನ್ನು ಮರಳು ಮತ್ತು ನಾಣ್ಯಗಳಲ್ಲಿ ಸುಂದರವಾಗಿ ರಚಿಸಿದ್ದಾರೆ. ಭಾರತದ ನಾಣ್ಯಗಳ ಜೊತೆಗೆ ಪಂದ್ಯದಲ್ಲಿ ಭಾಗವಹಿಸುತ್ತಿರುವ ಇತರ ದೇಶಗಳ 1350 ನಾಣ್ಯಗಳನ್ನು ಬಳಸಿ ಈ ಕಲಾಕೃತಿ ನಿರ್ಮಿಸಿದ್ದು, ಎಲ್ಲಾ ತಂಡಗಳಿಗೂ 'ಗುಡ್ ಲಕ್' ಹೇಳಿದ್ದಾರೆ. ಈ ನಾಣ್ಯಗಳನ್ನು ಅವರು ಪ್ರಪಂಚದಾದ್ಯಂತ ವಿವಿಧ ಮರಳು ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಂದರ್ಭಗಳಲ್ಲಿ ಸಂಗ್ರಹಿಸಿದ್ದರಂತೆ. ಇಂಥದ್ದೊಂದು ವಿಶಿಷ್ಠ ಕಲಾಕೃತಿ ರಚಿಸಲು 5 ಟನ್ ಮರಳನ್ನು ಪಟ್ನಾಯಕ್ ಬಳಸಿದ್ದಾರೆ.
ಇದನ್ನೂ ಓದಿ:ನೇತಾಜಿಯವರ 125ನೇ ಜನ್ಮವಾರ್ಷಿಕೋತ್ಸವ: ಮರಳು ಕಲಾಕೃತಿ ಮೂಲಕ ಗೌರವ