ಭುವನೇಶ್ವರ(ಒಡಿಶಾ): ಭಾರತದ ಆತಿಥ್ಯದಲ್ಲಿ ಫಿಫಾ 17 ವರ್ಷದೊಳಗಿನವರ ಮಹಿಳಾ ಫುಟ್ಬಾಲ್ ವಿಶ್ವಕಪ್ ನಾಳೆಯಿಂದ ಆರಂಭವಾಗಲಿದೆ. ಒಡಿಶಾ, ಗೋವಾ, ಮಹಾರಾಷ್ಟ್ರದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಹೋಸ್ಟ್ ಸಿಟಿ ಲೋಗೋವನ್ನು ಶನಿವಾರ ಬಿಡುಗಡೆ ಮಾಡಿದರು.
ಭಾರತದಲ್ಲಿ ನಡೆಯಲಿರುವ ಮೊದಲ ಫಿಫಾ ಮಹಿಳಾ ಫುಟ್ಬಾಲ್ ವಿಶ್ವಕಪ್ ಇದಾಗಿದೆ. ಅಕ್ಟೋಬರ್ 11 ರಿಂದ 30 ರವರೆಗೆ ಆಯೋಜಿಸಲಾಗಿದೆ. ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅಮೆರಿಕಾ, ಮೊರಾಕೊ ಮತ್ತು ಬ್ರೆಜಿಲ್ ಜೊತೆಗೆ ಸೆಣಸಾಡಲಿದೆ. ಗುಂಪು ಹಂತದ ಪಂದ್ಯಗಳನ್ನು ಒಡಿಶಾದ ಭುವನೇಶ್ವರ ಕಳಿಂಗ ಕ್ರೀಡಾಂಗಣದಲ್ಲಿ ಆಡಲಿದೆ. ಪಂದ್ಯಗಳ ಟಿಕೆಟ್‌ಗಳನ್ನು fifa.com/tickets ನಿಂದ ಖರೀದಿಸಬಹುದು.