ಪುರಿ(ಒಡಿಶಾ): ಫಿಫಾ ವಿಶ್ವಕಪ್‌ನಲ್ಲಿಂದು ಅರ್ಜೆಂಟೀನಾ ಮತ್ತು ಫ್ರಾನ್ಸ್ ಮಧ್ಯೆ ಫೈನಲ್ ಪಂದ್ಯ ನಡೆಯಲಿದ್ದು, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಈ ಜಿದ್ದಾಜಿದ್ದಿನ ಪೈಪೋಟಿಗೆ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ರೀತಿಯಲ್ಲಿ ಶುಭಹಾರೈಸಿದ್ದಾರೆ. ಒಡಿಶಾದ ಪುರಿ ಕಡಲ ತೀರದಲ್ಲಿ 148 ಫುಟ್ಬಾಲ್ಗಳನ್ನು ಬಳಸಿ ಮರಳು ಚಿತ್ರ ರಚಿಸಿದ್ದಾರೆ. ಇದು ಉಭಯ ತಂಡಗಳ ನಾಯಕರಿಬ್ಬರ ಚಿತ್ರವನ್ನು ಹೊಂದಿದ್ದು, ಅದರ ಕೆಳಗೆ 'ಗುಡ್ ಲಕ್' ಎಂದು ಬರೆದಿದ್ದಾರೆ.
ಇಂದು ಫಿಫಾ ವಿಶ್ವಕಪ್ ಫೈನಲ್: ಮರಳು ಕಲೆಯಲ್ಲಿ ಶುಭ ಕೋರಿದ ಸುದರ್ಶನ್ ಪಟ್ನಾಯಕ್ - ಈಟಿವಿ ಭಾರತ ಕನ್ನಡ
ಫಿಫಾ ವಿಶ್ವಕಪ್ 2022 ಟೂರ್ನಿಯಲ್ಲಿಂದು ಅರ್ಜೆಂಟೀನಾ ಮತ್ತು ಫ್ರಾನ್ಸ್ ಮಧ್ಯೆ ಫೈನಲ್ ಪಂದ್ಯ ನಡೆಯಲಿದೆ. ಒಡಿಶಾದ ಪ್ರಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ರೀತಿಯಲ್ಲಿ ಪಂದ್ಯಕ್ಕೆ ಶುಭಹಾರೈಸಿದ್ದಾರೆ.
ಮರಳು ಚಿತ್ರ