ಜುಂಜುನು(ರಾಜಸ್ಥಾನ):ಒಂದೇ ಕುಟುಂಬದ 25ಕ್ಕೂ ಹೆಚ್ಚು ಮಂದಿ ಪಿಕಪ್ ವಾಹನದಲ್ಲಿ ರಾಜಸ್ಥಾನದ ಜಂಜುನು ಬಡೌಕಿಧನಿಯಿಂದ ಲೋಹಗರದ ಮಾನಸ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪರಿಣಾಮ ಒಂದೇ ಕುಟುಂಬದ 11 ಮಂದಿ ದುರ್ಮರಣಕ್ಕೀಡಾಗಿದ್ದಾರೆ. 12 ಜನರು ಗಂಭೀರವಾಗಿ ಗಾಯಗೊಂಡಿದ್ದು, ಬಿಡಿಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ದೇವಸ್ಥಾನಕ್ಕೆ ತೆರಳುವಾಗ ಪಿಕಪ್ ವಾಹನ ಪಲ್ಟಿ: ಒಂದೇ ಕುಟುಂಬದ 11 ಮಂದಿ ಸಾವು - ಒಂದೇ ಕುಟುಂಬದ ಒಂಬತ್ತು ಮಂದಿ ದುರ್ಮರಣ
ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಪಿಕಪ್ ವಾಹನ ಪಲ್ಟಿಯಾಗಿ ರಾಜಸ್ಥಾನದಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ.
Nine Dead as Pickup Overturned in Rajasthan
ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಪ್ರಸಾದ್ ಗೌರ್, ಡಿವೈಎಸ್ಪಿ ಶಂಕರ್ಲಾಲ್, ಡಿಎಂಎಚ್ಒ ಡಾ.ಛೋಟೆ ಲಾಲ್ ಬಿಡಿಕೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆಯ ಮಾಹಿತಿ ಪಡೆದುಕೊಂಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್,ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಸ ಸೂಚಿಸಿದ್ದು, ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಗಾಯಗೊಂಡಿರುವವರ ಚಿಕಿತ್ಸೆಗೋಸ್ಕರ 50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ.
Last Updated : Apr 19, 2022, 7:55 PM IST