ನವದೆಹಲಿ: ಹಾಳಾಗಿರುವ ರಸ್ತೆಗಳಲ್ಲಿ ಅಪಘಾತಗಳಾಗುವುದು ಕಡಿಮೆ. ಇದಕ್ಕೆ ಹೋಲಿಸಿದರೆ ಸುಸ್ಥಿತಿಯಲ್ಲಿರುವ ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಅಪಘಾತಗಳ ಸಂಖ್ಯೆ ಜಾಸ್ತಿ ಎಂದು ಛತ್ತೀಸಗಢ ಸಚಿವ ಪ್ರೇಮಸಾಯಿ ಸಿಂಗ್ ಟೇಕಮ್ ಬುಧವಾರ ಹೇಳಿದ್ದಾರೆ. ರಸ್ತೆಗಳ ರಿಪೇರಿ ಯಾವಾಗ ಎಂದು ಕೇಳಿದ್ದಕ್ಕೆ ಸಚಿವರು ಈ ರೀತಿ ಉತ್ತರ ನೀಡಿದರು.
ವದ್ರಾಫ್ ನಗರದಲ್ಲಿ ನಡೆಯುತ್ತಿರುವ ವ್ಯಸನಮುಕ್ತಿ ಶಿಬಿರವೊಂದರಲ್ಲಿ ಪಾಲ್ಗೊಂಡಿದ್ದ ಸಚಿವರಿಗೆ ರಸ್ತೆಗಳು ಹಾಳಾಗಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ನಾವು ಈಗಾಗಲೇ ದುರಸ್ತಿ ಕಾರ್ಯ ಆರಂಭಿಸಿದ್ದೇವೆ. ಟೆಂಡರ್ ಪಾಸ್ ಆಗಿದ್ದರೂ ಕೆಲ ಕಾರಣಗಳಿಂದ ಗುತ್ತಿಗೆದಾರರು ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ. ಬಹುಶಃ ಮಳೆಯಿಂದ ಸಮಸ್ಯೆ ಆಗಿರಬಹುದು.
ಅಲ್ಲದೆ ಇದಕ್ಕೆ ಇನ್ನೊಂದು ಕಾರಣವೂ ಇದೆ. ಎಲ್ಲಾದರೂ ರಸ್ತೆಗಳು ಹಾಳಾಗಿದ್ದರೆ ಅವನ್ನು ದುರಸ್ತಿಗೊಳಿಸುವಂತೆ ನಮಗೆ ಕರೆಗಳು ಬರುತ್ತವೆ. ಆದರೆ ಆ ರಸ್ತೆಗಳಲ್ಲಿ ಅಪಘಾತಗಳಾಗುವುದು ಕಡಿಮೆ. ಇಲ್ಲಿ ಸಾವಿನ ಸಂಖ್ಯೆಯೂ ಕಡಿಮೆ.