ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ನಾಡಿನ ಸಮಸ್ತ ಜನತೆಗೆ ಹೋಳಿಯ ಶುಭಾಶಯಗಳು. ಈ ಹಬ್ಬವು ಪ್ರತಿಯೊಬ್ಬರು ಜೀವನದಲ್ಲಿ ಸಂತಸ ಉಲ್ಲಾಸ ನೀಡುವುದರ ಜೊತೆಗೆ ಹೊಸ ಚೈತನ್ಯ ಮತ್ತು ಶಕ್ತಿ ತುಂಬಲಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಮೋದಿ ಹೋಳಿ ಹಬ್ಬದ ಶುಭ ಕೋರಿದ್ದಾರೆ.
ಓದಿ: ಹಿಟ್ ಅಂಡ್ ರನ್: ಹೋಳಿ ಹಬ್ಬದಂದೇ ಭೀಕರ ರಸ್ತೆ ಅಪಘಾತ, ನಾಲ್ವರ ಸಾವು!
ಹೋಳಿ ಪ್ರಧಾನವಾಗಿ ಹಿಂದೂ ಹಬ್ಬವಾಗಿದ್ದು, ಎಲ್ಲ ಸಮುದಾಯದ ಜನರು ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಇದು ವಸಂತ ಸುಗ್ಗಿಯ ಋತುವಿನ ಆಗಮನವನ್ನು ಸೂಚಿಸುತ್ತದೆ. ಈ ಹಬ್ಬದ ದಿನ ಸಿಹಿ ತಿಂಡಿಗಳು, ಬಣ್ಣದ ಪುಡಿ, ನೀರು ಮತ್ತು ಆಕಾಶಬುಟ್ಟಿಗಳನ್ನು ಹಾರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. 'ಹೋಳಿ ಹೈ' ಎಂದು ಬರೆದಿದ್ದಾರೆ.
ಹೋಳಿ ಹಬ್ಬದ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೂಡ ಜನತೆಗೆ ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಬಣ್ಣಗಳ ಹಬ್ಬ ಹೋಳಿ ಜನರಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವ ಹಬ್ಬವಾಗಿದ್ದು, ಅದು ಜನರ ಜೀವನದಲ್ಲಿ ಸಂತೋಷ ಮತ್ತು ಭರವಸೆಯನ್ನು ತರುತ್ತದೆ. ಈ ಉತ್ಸವವು ನಮ್ಮ ಸಾಂಸ್ಕೃತಿಕ ವೈವಿಧ್ಯತೆಗೆ ಅವಿಭಾಜ್ಯವಾಗಿರುವ ರಾಷ್ಟ್ರೀಯತೆಯ ಮನೋಭಾವವನ್ನು ಮತ್ತಷ್ಟು ಬಲಪಡಿಸಲಿ ಎಂದು ಟ್ವೀಟ್ ಮಾಡಿದ್ದಾರೆ.