ಭೋಪಾಲ್(ಮಧ್ಯಪ್ರದೇಶ):ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಕಾಂಗ್ರೆಸ್ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಸದ್ಯ ಮತ್ತೊಂದು ಹೇಳಿಕೆ ನೀಡಿದ್ದು, ಅದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
2028ರ ವೇಳೆಗೆ ಭಾರತದಲ್ಲಿ ಹಿಂದೂ-ಮುಸ್ಲಿಂ ಜನಸಂಖ್ಯೆ ಸಮವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 1951ರ ವೇಳೆ ಭಾರತದಲ್ಲಿ ಮುಸ್ಲಿಂರ ಜನನ ಪ್ರಮಾಣವು ಹಿಂದುಗಳಿಗಿಂತಲೂ ಕಡಿಮೆ ಇತ್ತು. ಆದರೆ ಸದ್ಯ ಮುಸ್ಲಿಂರ ಜನನ ಪ್ರಮಾಣ ಶೇ 2.7ರಷ್ಟಿದ್ದು, ಹಿಂದೂಗಳ ಜನನ ಪ್ರಮಾಣ ಶೇ. 2.3ರಷ್ಟಿದೆ. ಈ ಲೆಕ್ಕಾಚಾರ ನೋಡಿದರೆ 2028ರ ವೇಳೆಗೆ ಹಿಂದೂ-ಮುಸ್ಲಿಂರ ಜನನ ಪ್ರಮಾಣ ಸರಿಸಮಾನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.