ಕರ್ನಾಟಕ

karnataka

ETV Bharat / bharat

ತನ್ನೆರಡು ಮರಿಗಳೊಂದಿಗೆ ಕ್ಯಾಮರಾದಲ್ಲಿ ಸೆರೆಯಾದ ಅಪರೂಪದ ಹೆಣ್ಣು ಹಿಮಚಿರತೆ

ಹಿಮ ಚಿರತೆಗಳಲ್ಲದೇ ಅನೇಕ ಪ್ರಭೇದದ ಜೀವಿಗಳು ಸಹ ಈ ಕಣಿವೆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ವೇಳೆ ಸ್ಥಳೀಯರು ಸಹ ಚಿರತೆಗಳ ಕಂಡು ಭಯಭೀತರಾಗಿದ್ದರು. ಸದ್ಯ ಈ ಜಾತಿಯ ಚಿರತೆಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳೆಂದು ಗುರುತಿಸಲಾಗಿದೆ.

female-snow-leopard-spotted-with-her-two-cubs-in-lahul-spiti
ತನ್ನೆರಡು ಮರಿಗಳೊಂದಿಗೆ ಕ್ಯಾಮರಾದಲ್ಲಿ ಸೆರೆಯಾದ ಹಿಮ ಚಿರತೆ

By

Published : Feb 17, 2021, 4:03 PM IST

ಲಾಹೌಲ್ ಸ್ಪಿಟಿ (ಹಿಮಾಚಲ ಪ್ರದೇಶ): ಜಿಲ್ಲೆಯ ಸ್ಪಿಟಿ ಪ್ರದೇಶದಲ್ಲಿ ಹಿಮ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಇದೀಗ ಮೂರು ಹಿಮ ಚಿರತೆಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಲಾಹೌಲ್ ಪ್ರದೇಶದಲ್ಲಿ ಹಿಮ ಚಿರತೆಗಳು ಸೆರೆಯಾಗಿದ್ದು, ತಾಯಿ ಜೊತೆ ಎರಡು ಮರಿ ಚಿರತೆಗಳಿರುವುದು ದೃಢವಾಗಿದೆ.

ಇದಕ್ಕೂ ಮುನ್ನ ಇಲ್ಲಿನ ಜನವರಿ 11ರಂದು ಮೈಯಾಡ್ ಕಣಿವೆಯಲ್ಲಿ ಚಿರತೆಯೊಂದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೀಗ ಮೂರು ಹಿಮಚಿರತೆ ಸೆರೆಯಾಗಿವೆ.

ಇಲ್ಲಿನ ವನ್ಯಜೀವಿ ಸಂರಕ್ಷಣಾಲಯದ ಸಿಬ್ಬಂದಿ ಗಸ್ತು ತಿರುಗುವ ವೇಳೆ ಹಿಮ ಚಿರತೆಗಳಿರುವುದು ಕಂಡುಬಂದಿದೆ.

ಸಂಶೋಧಕರು ಕಳೆದ ಹಲವಾರು ವರ್ಷಗಳಿಂದ ವನ್ಯಜೀವಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ತಂಡ ನಿರಂತರವಾಗಿ ಗಸ್ತು ತಿರುಗುತ್ತಿದೆ ಎಂದು ಲಾಹೌಲ್ ಅರಣ್ಯ ಅಧಿಕಾರಿ ದಿನೇಶ್ ಶರ್ಮಾ ಹೇಳಿದ್ದಾರೆ.

ಹಿಮ ಚಿರತೆಗಳಲ್ಲದೇ ಅನೇಕ ಪ್ರಭೇದದ ಜೀವಿಗಳು ಸಹ ಈ ಕಣಿವೆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ವೇಳೆ ಸ್ಥಳೀಯರು ಸಹ ಚಿರತೆಗಳ ಕಂಡು ಭಯಭೀತರಾಗಿದ್ದರು. ಸದ್ಯ ಈ ಜಾತಿಯ ಚಿರತೆಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳೆಂದು ಗುರುತಿಸಲಾಗಿದೆ.

ಇದನ್ನೂ ಓದಿ:ಇಂದೋರ್ 'ಭಿಕ್ಷುಕ-ಮುಕ್ತ' ನಗರ ಮಾಡಲು ಪಣ ತೊಟ್ಟ ಸರ್ಕಾರ

ABOUT THE AUTHOR

...view details