ಚೆನ್ನೈ (ತಮಿಳುನಾಡು):ರೈಲಿನ ಲೇಡಿಸ್ ಕೋಚ್ನಲ್ಲಿ ಹತ್ತಿದ ವ್ಯಕ್ತಿಯೋರ್ವನಿಗೆ ಇಳಿಯುವಂತೆ ಹೇಳಿದ ರೈಲ್ವೆ ಭದ್ರತಾ ಪಡೆಯ ಮಹಿಳಾ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿದ ಘಟನೆ ಚೆನ್ನೈನ ಬೀಚ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಸಣ್ಣ ಚಾಕುವಿನಿಂದ ಮಹಿಳಾ ಪೇದೆಯ ಎದೆ ಮತ್ತು ಕುತ್ತಿಗೆಗೆ ಇರಿದು ಆರೋಪಿ ಪರಾರಿಯಾಗಿದ್ದಾನೆ.
ಆರ್‌ಪಿಎಫ್ ಕಾನ್ಸ್ಟೇಬಲ್ ಆಸಿರ್ವಾ ಎಂಬುವವರೇ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ರೈಲಿನ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಪುರುಷನೋರ್ವ ಹತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಈ ಕಂಪಾರ್ಟ್‌ಮೆಂಟ್‌ನಿಂದ ಹೊರಹೋಗುವಂತೆ ಆಸಿರ್ವಾ ಸೂಚಿಸಿದ್ದರು. ಆದರೆ, ಈ ವೇಳೆ 40 ವರ್ಷ ವಯಸ್ಸಿನ ವ್ಯಕ್ತಿ ಪೇದೆ ಹಲ್ಲೆಯೇ ಚಾಕುವಿನಿಂದ ನಡೆಸಿದ್ದಾನೆ.