ಕರ್ನಾಟಕ

karnataka

ETV Bharat / bharat

ಇಲ್ಲಿ ಕೊರೊನಾ ಸೇವೆಯಲ್ಲಿರುವ ಮಹಿಳಾ ನರ್ಸ್​ಗಳಿಗೆ ಕಿರುಕುಳ ಆರೋಪ - ಮಹಿಳಾ ನರ್ಸ್

ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಸೋಂಕಿತರ ಸೇವೆ ಮಾಡುತ್ತಿರುವ ನರ್ಸ್​ಗಳಿಗೆ ಯುವಕರು ಕಿರುಕುಳ ನೀಡುತ್ತಿರುವ ಆರೋಪ ಶಿಮ್ಲಾದಲ್ಲಿ ಕೇಳಿ ಬಂದಿದೆ.

female-nurse-molested-in-quarantine-center-in-shimla
ಶಿಮ್ಲಾದಲ್ಲಿ ಕೊರೊನಾ ಸೇವೆಯಲ್ಲಿರುವ ಮಹಿಳಾ ನರ್ಸ್​ಗಳಿಗೆ ಕಿರುಕುಳ

By

Published : May 20, 2021, 4:44 PM IST

ಶಿಮ್ಲಾ:ಕೊರೊನಾ ಸೋಂಕಿತರಿಗೆ ಆರೈಕೆ ಮಾಡುತ್ತಿರುವ ನರ್ಸ್​ಗಳಿಗೆ ಯುವಕರ ಗುಂಪೊಂದು ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

ಶಿಮ್ಲಾದಲ್ಲಿ ಕೊರೊನಾ ಸೇವೆಯಲ್ಲಿರುವ ಮಹಿಳಾ ನರ್ಸ್​ಗಳಿಗೆ ಕಿರುಕುಳ

ಶಿಮ್ಲಾದ ಐಜಿಎಎಮ್‌ನ ಕೋವಿಡ್ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಮಹಿಳಾ ನರ್ಸ್​ಗಳು ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಈ ಅವಕಾಶ ಬಳಸಿಕೊಂಡ ಕೆಲ ಯುವಕರು ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ಕೆಲ ಯುವಕರು ರಾತ್ರಿ ನರ್ಸ್​ಗಳ ಕೋಣೆಗೆ ಪ್ರವೇಶಿಸಲು ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದರಿಂದ ಗಾಬರಿಯಾದ ನರ್ಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಕೆಲ ಯುವಕರನ್ನು ಹಿಡಿದು ಪ್ರಶ್ನಿಸಿದ್ದಾರೆ. ಈ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.

ಓದಿ:ಚೈತನ್ಯ ಕಳೆದುಕೊಂಡ ಸರ್ಕಾರದಿಂದ ಉತ್ತರ ಪಡೆಯುವುದಾದರೂ ಹೇಗೆ? ; ಸಿದ್ದರಾಮಯ್ಯ

ABOUT THE AUTHOR

...view details