ಬೇಗುಸರಾಯ್(ಬಿಹಾರ):ಸಾಧನೆ ಮಾಡಬೇಕು ಎಂಬ ಛಲ, ಉತ್ಸಾಹ, ಹಂಬಲವಿದ್ದರೆ ಯಾವುದೇ ಕಠಿಣ ಸಮಸ್ಯೆಯೂ ಅಡ್ಡಿ ಬರಲ್ಲ ಎಂಬುದು ಅನೇಕ ನಿದರ್ಶನಗಳಲ್ಲಿ ಸಾಬೀತುಗೊಂಡಿದೆ. ಸದ್ಯ ಅಂತಹ ಮತ್ತೊಂದು ಪ್ರಕರಣ ಬಿಹಾರದಲ್ಲಿ ನಡೆದಿದ್ದು, ಮಡಿಲಲ್ಲಿ ಮಗುವಿಟ್ಟುಕೊಂಡು ಕಾನ್ಸ್ಟೇಬಲ್ ಹುದ್ದೆ ನಿರ್ವಹಿಸುತ್ತಿದ್ದ ಮಹಿಳೆಯೋರ್ವಳು ಕಠಿಣ ಪರೀಕ್ಷೆ ಪಾಸ್ ಮಾಡಿ ಇದೀಗ ಡಿಎಸ್ಪಿ ಆಗಿದ್ದಾರೆ.
ಕಠಿಣ ಪರೀಕ್ಷೆ ಪಾಸ್ ಮಾಡಿ ಡಿಎಸ್ಪಿ ಆದ ಗಟ್ಟಿಗಿತ್ತಿ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಮಹಿಳಾ ಕಾನ್ಸ್ಟೇಬಲ್ ಇದೀಗ ಡಿಎಸ್ಪಿ ಆಗಿ ನೇಮಕಗೊಂಡಿದ್ದಾರೆ. ಕುಟುಂಬದ ಜವಾಬ್ದಾರಿ ಮತ್ತು ಪೊಲೀಸ್ ಕರ್ತವ್ಯದ ನಡುವೆ ಕಠಿಣ ಅಭ್ಯಾಸ ಮಾಡಿರುವ ಅವರು, ಬಿಹಾರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ ಪಾಸ್ ಮಾಡಿ ಇದೀಗ ಉಪ ಪೊಲೀಸ್ ವರಿಷ್ಠಾಧಿಕಾರಿ ನೇಮಕಗೊಂಡಿದ್ದಾರೆ.ಬಿಹಾರ ಪೊಲೀಸ್ ಇಲಾಖೆಯಲ್ಲಿ ಬಬ್ಲಿ ಕುಮಾರಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ನಡೆದ ಬಿಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ, ಬಿಹಾರ ಪೊಲೀಸ್ ಇಲಾಖೆಯಲ್ಲಿ ಉಪ ಪೊಲೀಸ್ ಅಧೀಕ್ಷಕರಾಗಿದ್ದಾರೆ.
2015ರಲ್ಲಿ ಬಿಹಾರ ಪೊಲೀಸ್ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಬಬ್ಲಿ ಕುಮಾರಿ, ಆರಂಭದಲ್ಲಿ ಖಗಾರಿಯಾ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದರು. ತದನಂತರ ಬೇಗುಸರಾಯ್ನಲ್ಲಿ ಕೆಲಸ ನಿರ್ವಹಿಸುತ್ತಾರೆ. ಈ ವೇಳೆ ಮದುವೆ ಮಾಡಿಕೊಂಡಿರುವ ಅವರು, ಮುದ್ದಾದ ಮಗುವಿಗೆ ಜನ್ಮ ನೀಡುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಮಡಿಲಲ್ಲಿ ಮಗುವನ್ನಿಟ್ಟುಕೊಂಡು ಅವರು ಕೆಲಸ ಮಾಡಿರುವ ನಿದರ್ಶನಗಳಿವೆ. ಆದರೆ, ಇದೀಗ ದೊಡ್ಡ ಪರೀಕ್ಷೆ ಪಾಸ್ ಮಾಡಿದ್ದು, ಮುಂದಿನ ಕೆಲ ದಿನಗಳಲ್ಲಿ ರಾಜ್ಗೀರಿ ಅಕಾಡೆಮಿಗೆ ತರಬೇತಿ ಪಡೆದುಕೊಳ್ಳಲು ತೆರಳಲಿದ್ದಾರೆ.
ಮಡಿಲಲ್ಲಿ ಮಗುವಿಟ್ಟುಕೊಂಡು ಕಾನ್ಸ್ಟೇಬಲ್ ಸೇವೆ ಮಾಡ್ತಿದ್ದ ಯುವತಿಗೆ ಒಲಿದ ಅದೃಷ್ಟ ಇದನ್ನೂ ಓದಿ:ಯಾದಗಿರಿ : 5 ತಿಂಗಳ ಮಗುವಿನ ಜತೆಗೇ ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಾನ್ಸ್ಟೇಬಲ್..
ತಮ್ಮ ಸಾಧನೆ ಬಗ್ಗೆ ಮಾತನಾಡಿರುವ ಬಬ್ಲಿ ಕುಮಾರಿ, ಮನೆಯಲ್ಲಿ ನಾನು ಹಿರಿಯ ಮಗಳು. ಕುಟುಂಬದ ಜವಾಬ್ದಾರಿ ನಿರ್ವಹಿಸುವ ಉದ್ದೇಶದಿಂದ 2015ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಆಯ್ಕೆಯಾಗುತ್ತೇನೆ. ಇದಾದ ಬಳಿಕ ಬೇರೆ ಬೇರೆ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಇದೀಗ ಮೂರನೇ ಪ್ರಯತ್ನದಲ್ಲಿ BPSC ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವೆ ಎಂದಿದ್ದಾರೆ. ಇವರನ್ನ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸನ್ಮಾನಿಸಿದ್ದಾರೆ.