ಕರ್ನಾಟಕ

karnataka

ETV Bharat / bharat

ನಮೀಬಿಯಾದಿಂದ ಭಾರತಕ್ಕೆ ಬಂದ ಹೆಣ್ಣು ಚೀತಾ ಶಾಶಾಳಿಗೆ ಕಿಡ್ನಿ ಸಮಸ್ಯೆ - ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ

ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿರುವ ಹೆಣ್ಣು ಚೀತಾ ಶಾಶಾಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

Cheetah
ಚೀತಾ

By

Published : Jan 27, 2023, 1:06 PM IST

Updated : Jan 27, 2023, 2:52 PM IST

ಶಿಯೋಪುರ್ (ಮಧ್ಯಪ್ರದೇಶ) :ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ ಎಂಟು ಚೀತಾಗಳ ಪೈಕಿ ಶಾಶಾ ಎಂಬ ಹೆಣ್ಣು ಚೀತಾ ಅಸ್ವಸ್ಥಗೊಂಡಿದೆ. ಕಿಡ್ನಿ ಸಮಸ್ಯೆ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದು ಮೇಲ್ವಿಚಾರಣೆಯಲ್ಲಿದ್ದಾಳೆ ಎಂದು ಅರಣ್ಯಾಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17, 2022 ರಂದು ತಮ್ಮ ಜನ್ಮದಿನದ ಸಂದರ್ಭದಲ್ಲಿ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಮೂರು ಹೆಣ್ಣು ಚೀತಾಗಳು ಸೇರಿದಂತೆ ಎಂಟು ಚೀತಾಗಳನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಶಾಶಾಳಾಗಿರುವ ಹೆಣ್ಣು ಚೀತಾ ಅನಾರೋಗ್ಯಕ್ಕೆ ತುತ್ತಾಗಿದ್ದು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದೆ. ಶಾಶಾಳ ದೇಹದಲ್ಲಿ ಹೆಪಟೋರೆನಲ್ (ಮೂತ್ರಪಿಂಡ ಮತ್ತು ಯಕೃತ್ತಿಗೆ ಸಂಬಂಧಿಸಿದ) ಸೋಂಕು ಪತ್ತೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಚೀತಾಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಅರಣ್ಯ ಆಡಳಿತವು ಶಾಶಾಳನ್ನು ಇರಿಸಲಾಗಿದ್ದ ಆವರಣದಿಂದ ಹೊರತೆಗದು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಚೀತಾವನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ಚಿಕಿತ್ಸೆಗೆ ಭೋಪಾಲ್‌ನಿಂದ ಪಶುವೈದ್ಯಕೀಯ ತಜ್ಞರ ತಂಡವನ್ನೂ ಕರೆಸಲಾಗಿದೆ. ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ಮಾತನಾಡಿ, "ನಮೀಬಿಯಾದಿಂದ ತರಲಾದ ಎಂಟು ಚೀತಾಗಳ ಮೇಲೆ ಪ್ರತಿನಿತ್ಯ ಇಲ್ಲಿ ನಿಗಾ ಇಡಲಾಗುತ್ತಿದೆ" ಎಂದು ಹೇಳಿದರು.

"ಈ ಸಂದರ್ಭದಲ್ಲಿ ಹೆಣ್ಣು ಚೀತಾ ಶಾಶಾ ಸ್ವಲ್ಪ ದುರ್ಬಲವಾಗಿರುವುದು ಕಂಡುಬಂದಿದೆ. ಹಾಗಾಗಿ ಶಾಶಾಳಿಗೆ ಆಹಾರ ನೀಡಿ, ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಆ ಸಂದರ್ಭದಲ್ಲಿ ಆಕೆಗೆ ಈ ಸಮಸ್ಯೆ ಎದುರಾಗಿರುವುದು ಕಂಡು ಬಂದಿದೆ. ನಂತರ ಚೀತಾಗೆ ಪ್ರತ್ಯೇಕ ವೈದ್ಯಕೀಯ ಪರೀಕ್ಷೆಗಳ ಅಗತ್ಯವಿದೆ ಎಂದು ತಿಳಿದುಬಂದಿದೆ. ಮತ್ತೆ ಆಕೆಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ವರದಿಯಲ್ಲಿ ದೇಹದಲ್ಲಿ ನಿರ್ಜಲೀಕರಣ ಮತ್ತು ಕಿಡ್ನಿಯಲ್ಲಿ ಸ್ವಲ್ಪ ಏರುಪೇರಾಗಿರುವುದು ಕಂಡು ಬಂದಿದೆ."

"ಆದರೆ ನಮ್ಮಲ್ಲಿ ತಕ್ಷಣಕ್ಕೆ ಸೋನೋಗ್ರಫಿ ಮಾಡಲು ಕೆಲವು ಉಪಕರಣಗಳು ಇರಲಿಲ್ಲ. ಹಾಗಾಗಿ ಭೋಪಾಲ್‌ನಿಂದ ವೈದ್ಯರ ತಂಡವನ್ನು ಕರೆಸಲಾಯಿತು. ವೈದ್ಯರು ಪೋರ್ಟಬಲ್ ಉಪಕರಣದೊಂದಿಗೆ ಇಲ್ಲಿಗೆ ಆಗಮಿಸಿ ಶಾಶಾಳ ಪರೀಕ್ಷೆ ನಡೆಸಿದರು. ಇದರ ವರದಿಯನ್ನು ನಂತರ ನೀಡಲಾಗುತ್ತದೆ. ಸಂಪೂರ್ಣ ವರದಿಯನ್ನು ಭೋಪಾಲ್‌ನಲ್ಲಿ ತಯಾರಿ ಮಾಡಲಾಗುವುದು ಮತ್ತು ಅವರ ಹಿರಿಯ ಅಧಿಕಾರಿಗಳು ಅದರ ಬಗ್ಗೆ ಹೆಚ್ಚಿನ ವಿವರವಾದ ಮಾಹಿತಿಯನ್ನು ನೀಡಲು ಸಾಧ್ಯ" ಎಂದು ಡಿಎಫ್‌ಒ ಪ್ರಕಾಶ್ ಕುಮಾರ್ ವರ್ಮಾ ಹೇಳಿದರು.

ಇನ್ನು ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ವೀಕ್ಷಣೆಗಾಗಿ ಇಬ್ಬರು ಸ್ಥಳೀಯ ವೈದ್ಯರು ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ವೈದ್ಯರು ಇದ್ದಾರೆ. ಶಾಶಾ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ ಎಂಬ ಮಾಹಿತಿಯು ತಿಳಿದ ನಂತರ ರಾಜ್ಯ ರಾಜಧಾನಿ ಭೋಪಾಲ್‌ನಲ್ಲಿರುವ ವಾನ್ ವಿಹಾರ್ ರಾಷ್ಟ್ರೀಯ ಉದ್ಯಾನವನದ ವೈದ್ಯರ ತಂಡವು ಬುಧವಾರ ಸಂಜೆ ಕುನೊ ಪಾರ್ಕ್‌ಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ವಾನ್ ವಿಹಾರ್ ರಾಷ್ಟ್ರೀಯ ಉದ್ಯಾನವನದ ಮುಖ್ಯ ಪಶುವೈದ್ಯ ಡಾ.ಅತುಲ್ ಗುಪ್ತಾ ಮತ್ತು ಅವರ ಸಹಾಯಕ ವೈದ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ಎದೆನೋವು ಎಂದು ಆಸ್ಪತ್ರೆಗೆ ದಾಖಲಾದ ಅನ್ನು ಕಪೂರ್: ಆರೋಗ್ಯದಲ್ಲಿ ಚೇತರಿಕೆ

Last Updated : Jan 27, 2023, 2:52 PM IST

ABOUT THE AUTHOR

...view details