ನವದೆಹಲಿ :ಗೂಗಲ್ ಪೇ ಬಳಕೆದಾರರು ಭಾರತದಲ್ಲಿ ಹಣ ವರ್ಗಾವಣೆಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದು ಯುಎಸ್ನ ಬಳಕೆದಾರರಿಗೆ ಮಾತ್ರ ಅನ್ವಯ ಎಂದು ಗೂಗಲ್ ಸ್ಪಷ್ಟಪಡಿಸಿದೆ.
ಯುಎಸ್ನಿಂದ ಪ್ರಾರಂಭಿಸಿ ಮುಂದಿನ ವರ್ಷ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಮರುವಿನ್ಯಾಸಗೊಳಿಸಲಾದ ಗೂಗಲ್ ಪೇ ಅಪ್ಲಿಕೇಶನ್‌ನ ಪ್ರಾರಂಭಿಸುವುದಾಗಿ ಗೂಗಲ್ ಘೋಷಿಸಿತ್ತು. ಅಲ್ಲದೆ ಆ ಬಳಿಕ ಬಳಕೆದಾರರು ವೆಬ್ ಬ್ರೌಸರ್‌ನಲ್ಲಿ ಸೇವೆ ಬಳಸಲು ಸಾಧ್ಯವಾಗುವುದಿಲ್ಲ ಎಂದು ಕಳೆದ ವಾರ ಗೂಗಲ್ ಹೇಳಿಕೆ ನೀಡಿತ್ತು.
ಗೂಗಲ್ ಪೇ ಕೂಡ ತ್ವರಿತ ಹಣ ವರ್ಗಾವಣೆಗೆ ಶುಲ್ಕ ಸೇರಿಸುತ್ತದೆ ಎಂದು ಕೆಲ ವರದಿಗಳು ತಿಳಿಸಿವೆ. 'ಈ ಶುಲ್ಕಗಳು ಯುಎಸ್‌ಗೆ ಮಾತ್ರ ಅನ್ವಯಿಸುತ್ತವೆ. ಭಾರತದಲ್ಲಿ ಗೂಗಲ್ ಪೇ ಅಥವಾ ಗೂಗಲ್ ಪೇ ಫಾರ್ ಬ್ಯುಸಿನೆಸ್ ಅಪ್ಲಿಕೇಶನ್‌ಗಳಿಗೆ ಇದು ಅನ್ವಯಿಸುವುದಿಲ್ಲ' ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.