ಚಿತ್ತೋರಗಢ(ರಾಜಸ್ಥಾನ):ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದಿನಿಂದಲೂ ಕೆಲವರು ಹಿಂದೇಟು ಹಾಕುತ್ತಿರುವ ಘಟನೆ ನಡೆಯುತ್ತಿವೆ. ಸದ್ಯ ಅಂತಹದೊಂದು ಪ್ರಕರಣ ರಾಜಸ್ಥಾನದಲ್ಲಿ ನಡೆದಿದೆ.
ಗ್ರಾಮೀಣ ಭಾಗದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಬಗ್ಗೆ ವಿಚಿತ್ರ ಭಯ ಶುರುವಾಗಿದ್ದು, ಅದೇ ಕಾರಣಕ್ಕಾಗಿ ಕೆಲವರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ರಾಜಸ್ಥಾನದ ಚಿತ್ತೋರಗಢದಲ್ಲಿ ವೃದ್ಧೆಯೋರ್ವರು ಭಯದಿಂದ ಪೊದೆಯೊಳಗೆ ಅಡಗಿ ಕುಳಿತಿರುವ ಘಟನೆ ನಡೆದಿದೆ.
ವ್ಯಾಕ್ಸಿನ್ ನೀಡಲು ವೈದ್ಯಾಧಿಕಾರಿಗಳು ಗ್ರಾಮಕ್ಕೆ ಬರುತ್ತಿದ್ದಂತೆ ಗಾಬರಿಗೊಂಡ ವೃದ್ಧೆ ಕಾಡಿನತ್ತ ಹೋಗಿ ಪೊದೆಯೊಳಗೆ ಅಡಗಿ ಕುಳಿತ್ತಿದ್ದಾರೆ. ಅಲ್ಲಿಗೆ ತೆರಳಿದ ಕೆಲವರು ವೃದ್ಧೆಯನ್ನ ಹೊರಗಡೆ ಕರೆದುಕೊಂಡು ಬರಲು ಮುಂದಾಗಿದ್ದಾರೆ. ಈ ವೇಳೆ ಎರಡು ಕೈ ಮುಗಿದು ಲಸಿಕೆ ಹಾಕದಂತೆ ಮನವಿ ಮಾಡಿದ್ದಾರೆ.