ವಾಷಿಂಗ್ಟನ್:ವಿಶ್ವವನ್ನೇ ಕಾಡಿದ ಕೊರೊನಾ ವೈರಾಣು ಚೀನಾದ ವುಹಾನ್‌ನಲ್ಲಿನ ಲ್ಯಾಬ್ನಿಂದ ಸೋರಿಕೆಯಾಗಿದೆ ಎಂದು ಅಮೆರಿಕದ ಅಧ್ಯಯನ ವರದಿ ಹೇಳಿದ ಬೆನ್ನಲ್ಲೇ, ಅಲ್ಲಿನ ಸರ್ಕಾರಿ ತನಿಖಾ ಸಂಸ್ಥೆಯಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕ ಕ್ರಿಸ್ಟೋಫರ್ ವ್ರೇ ಇದನ್ನು ಬೆಂಬಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ, COVID-19 ಸಾಂಕ್ರಾಮಿಕದ ಮೂಲವು ಚೀನಾದ ವುಹಾನ್‌ನಲ್ಲಿನ ಲ್ಯಾಬ್ ಆಗಿರುವುದನ್ನು ಎಫ್‌ಬಿಐ ನಿರ್ಣಯಿಸಿದೆ ಎಂದು ಹೇಳಿದ್ದಾರೆ.
"ಸಾಂಕ್ರಾಮಿಕ ರೋಗದ ಮೂಲ ವುಹಾನ್ ಲ್ಯಾಬ್ನ ಅಚಾತುರ್ಯವಾಗಿದೆ. ಇದನ್ನು ಎಫ್‌ಬಿಐ ನಿರ್ಣಯಿಸಿದೆ. ಚೀನೀ ಸರ್ಕಾರ ಇದನ್ನು ಅಲ್ಲಗಳೆದಿದೆ ಎಂಬುದು ನಮ್ಮ ಗಮನಕ್ಕಿದೆ. ಆದರೆ, ನಮ್ಮ ಅಧ್ಯಯನದಲ್ಲಿ ಅದು ದೃಢಗೊಂಡಿದೆ. ನಮ್ಮ ನಿಕಟ ವಿದೇಶಿ ಪಾಲುದಾರ ರಾಷ್ಟ್ರ ಚೀನಾದ ಸಮರ್ಥನೆಯನ್ನು ಅಲ್ಲಗಳೆಯಲಾಗುವುದು'' ಎಂದು ಹೇಳಿದ್ದಾರೆ.
ಕೊರೊನಾ ಮೂಲದ ಬಗ್ಗೆ ಡಿಪಾರ್ಟ್ಮೆಂಟ್ ಆಫ್ ಪವರ್ ನಡೆಸಿದ ಅಧ್ಯಯನ ಕೆಲ ದಿನಗಳ ಹಿಂದೆ ವರದಿ ನೀಡಿತ್ತು. ಅದರಲ್ಲಿ ಚೀನಾದಿಂದಲೇ ವೈರಾಣು ಪ್ರಸಾರವಾಗಿದೆ ಎಂದು ಹೇಳಿತ್ತು. ವರದಿಯನ್ನು ಶ್ವೇತಭವನಕ್ಕೆ ನೀಡಿ, ಸೆನೆಟ್ ಸದಸ್ಯರಿಗೆ ಹಂಚಿಕೆ ಮಾಡಲಾಗಿತ್ತು. ಸಾಂಕ್ರಾಮಿಕ ರೋಗದ ಮೂಲದ ಬಗ್ಗೆ ತಮ್ಮದೇ ಆದ ತನಿಖೆಗಳನ್ನು ನಡೆಸಲು ಅಧ್ಯಕ್ಷ ಜೋ ಬೈಡನ್ ಅವರು ಗುಪ್ತಚರ ಸಂಸ್ಥೆಗಳನ್ನು ಕೋರಿತ್ತು.
ಚೀನಾದ ಪ್ರಯೋಗಾಲಯದಲ್ಲಿ ಸಂಭವಿಸಿದ ಅಚಾತುರ್ಯದಿಂದ ವೈರಸ್ ಹರಡಿದೆ ಎಂಬ ಡಿಪಾರ್ಟ್ಮೆಂಟ್ ಆಫ್ ಪವರ್ ವರದಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ಗೆ ಸೇರಿದೆ. ಈ ಅಧ್ಯಯನ ಬುದ್ಧಿವಂತಿಕೆಯ ಫಲಿತಾಂಶವಾಗಿದೆ ಮತ್ತು ಗಮನಾರ್ಹವಾಗಿದೆ. ಸಂಸ್ಥೆಯು ಗಣನೀಯ ವೈಜ್ಞಾನಿಕ ಪರಿಣತಿಯನ್ನು ಹೊಂದಿದ್ದು, ಅಮೆರಿಕದ ರಾಷ್ಟ್ರೀಯ ಪ್ರಯೋಗಾಲಯಗಳ ಮೇಲ್ವಿಚಾರಣೆ ಮಾಡುತ್ತದೆ ಎಂದು ಎಫ್‌ಬಿಐ ನಿರ್ದೇಶಕರು ಹೇಳಿದ್ದಾರೆ.
ಅಮೆರಿಕದ ಅಧ್ಯಯನ ವರದಿಯಲ್ಲೇನಿದೆ:ಕೊರೊನಾ ವೈರಾಣು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿದೆ ಎಂದು ಯುಎಸ್ ಡಿಪಾರ್ಟ್ಮೆಂಟ್ ಆಫ್ ಎನರ್ಜಿ ತನ್ನ ವರ್ಗೀಕರಿಸಿದ ವರದಿಯನ್ನು ಶ್ವೇತಭವನಕ್ಕೆ ನೀಡಿತ್ತು. ವೈರಾಣು ಮೂಲದ ಕುರಿತು ಅಧ್ಯಯನ ನಡೆಸಿದ್ದ ಸಂಸ್ಥೆ ಕೋವಿಡ್ -19 ವೈರಸ್ ಚೀನಾದ ಪ್ರಯೋಗಾಲಯದಲ್ಲಿ ಅಚಾನಕ್ಕಾಗಿ ಹರಡಿರಬಹುದು. ಅದು ಬಳಿಕ ಇಡೀ ವಿಶ್ವಾದ್ಯಂತ ವ್ಯಾಪಿಸಿತು ಎಂದು ಹೇಳಿದೆ.