ಕರ್ನಾಟಕ

karnataka

ETV Bharat / bharat

ಅಧಿವೇಶನದ ಬಳಿಕ IT ಸಚಿವರ ಜೊತೆ ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆಗಳ ಮುಖ್ಯಸ್ಥರ ಸಭೆ

ಸಂಸತ್ತಿನ​ ಮಳೆಗಾಲದ ಅಧಿವೇಶನ ಮುಕ್ತಾಯದ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆಗಳ ಅಧಿಕಾರಿಗಳು ಐಟಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.

FB, Twitter
ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ

By

Published : Aug 2, 2021, 9:39 AM IST

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆಗಸ್ಟ್ 13ಕ್ಕೆ ಮುಕ್ತಾಯಗೊಳ್ಳಲಿದೆ. ಬಳಿಕ ಫೇಸ್​ಬುಕ್​, ಟ್ವಿಟ್ಟರ್​ ಮತ್ತು ಗೂಗಲ್​ನಂತಹ ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆಗಳ ಅಧಿಕಾರಿಗಳು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಈ ವೇಳೆ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2021ರ ನೂತನ ಐಟಿ ನಿಯಮಗಳ ಕುರಿತಾಗಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ. ಆಪರೇಟಿಂಗ್ ಕಾರ್ಯವಿಧಾನದಲ್ಲಿರುವ ಗೊಂದಲ ಹಾಗೂ ಕಾರ್ಯಾಚರಣೆಯ ಸಮಸ್ಯೆಗಳ ಕುರಿತು ಸಚಿವಾಲಯದ ಜತೆಗೆ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ಭಾರತದ ಹೊಸ IT ಕಾನೂನು ತಂದ ಬದಲಾವಣೆ: 1.5 ಲಕ್ಷಕ್ಕೂ ಹೆಚ್ಚು ಆಕ್ಷೇಪಾರ್ಹ ವಿಷಯ ತೆಗೆದು ಹಾಕಿದ ಗೂಗಲ್

ಕೆಲ ತಿಂಗಳ ಹಿಂದೆ ಹೊಸ ಐಟಿ ನಿಯಮಗಳನ್ನು ಜಾರಿಗೆ ತರುವ ವಿಚಾರವಾಗಿ ಸರ್ಕಾರ ಹಾಗೂ ಟೆಕ್​ ದೈತ್ಯ ಸಂಸ್ಥೆಗಳ ನಡುವೆ ಸಮರ ನಡೆಯುತ್ತಿತ್ತು. ಕ್ಯಾಬಿನೆಟ್​ ಪುನರ್​ ರಚನೆಯ ನಂತರ, ಅಶ್ವಿನಿ ವೈಷ್ಣವ್​ ಐಟಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.

ABOUT THE AUTHOR

...view details