ಕರ್ನಾಟಕ

karnataka

ETV Bharat / bharat

ಹಣವಿಲ್ಲದಿದ್ದರೇನು ವಿಡಿಯೋ ಕಾನ್ಪರೆನ್ಸ್​ ಇದೆಯೆಲ್ಲ; ಆನ್​ಲೈನ್​ನಲ್ಲೇ ನಿಕಾಹ್ ಓದಿ ಭಾರತದ ಹೊಸ್ತಿಲು ತುಳಿದ ವಧು! - Indo Pak Railway Service

ಇಂದಿಗೂ ಭಾರತ ಹಾಗೂ ಪಾಕಿಸ್ತಾನ ನಾಗರಿಕರ ಹೃದಯಗಳ ನಡುವಿನ ಸಂಬಂಧಗಳು ಸಂಪರ್ಕ ಹೊಂದಿವೆ. ಈ ಬಾಂಧವ್ಯ ಎಷ್ಟು ಗಾಢವಾಗಿದೆಯೆಂದರೆ, ವಿಡಿಯೋ ಕಾನ್ಪರೆನ್ಸಿಂಗ್​ ಮೂಲಕ ವಿವಾಹ ನಡೆಯುತ್ತಿವೆ.

ಪಾಕಿಸ್ತಾನಿ ವಧು-ಭಾರತದ ವರನ ವಿವಾಹ
ಪಾಕಿಸ್ತಾನಿ ವಧು-ಭಾರತದ ವರನ ವಿವಾಹ

By

Published : May 25, 2023, 8:58 PM IST

ಜೋಧಪುರ (ರಾಜಸ್ಥಾನ): ಬುಧವಾರ ಸೂರ್ಯನಗರಿ ಜೋಧ್‌ಪುರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ನಡೆಯಿತು ಮತ್ತು ಮದುವೆಯ ನಂತರ ವಧು ಪಾಕಿಸ್ತಾನದಿಂದ ವಾಘಾ ಗಡಿಯ ಮೂಲಕ ಜೋಧ್‌ಪುರ ತಲುಪಿದರು. ನಿಸ್ಸಂಶಯವಾಗಿ ಒಂದೆಡೆ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಸಂಘರ್ಷ ಮುಂದುವರೆದಿದೆ. ಆದರೆ ಇಂದಿಗೂ ಭಾರತ ಮತ್ತು ಪಾಕಿಸ್ತಾನದ ನಾಗರಿಕರ ಹೃದಯಗಳ ನಡುವಿನ ಸಂಬಂಧಗಳು ಸಂಪರ್ಕ ಹೊಂದಿವೆ. ಈ ಸಂಬಂಧಗಳು ಎಷ್ಟು ಗಾಢವಾಗಿದೆಯೆಂದರೆ, ವಿಡಿಯೋ ಮೂಲಕ ಹೆಣ್ಣುಮಕ್ಕಳ ಮದುವೆಗಳು ನಡೆಯುತ್ತಿವೆ.

ವಧುವನ್ನು ನೋಡಲು ಆಗಮಿಸುತ್ತಿರುವ ಅತಿಥಿಗಳು: ಪಾಕಿಸ್ತಾನದ ಮೀರ್‌ಪುರ್ ಖಾಸ್‌ನ ಉರುಜ್ ಫಾತಿಮಾ, ಜನವರಿ 2, 2023 ರಂದು ಜೋಧ್‌ಪುರ ನಗರದ ಮುಝಮ್ಮಿಲ್ ಖಾನ್ ಜೊತೆಗೆ ಆನ್‌ಲೈನ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಿಕಾಹ್ ಓದಿದ್ದು, ಸುಮಾರು ಐದು ತಿಂಗಳ ನಂತರ ಈಗ ತನ್ನ ಪತಿ ಸೇರಿದ್ದಾರೆ. ಅತ್ತಿಗೆ ಮನೆಯಲ್ಲಿ ಸಂತಸದ ವಾತಾವರಣ, ಅತಿಥಿಗಳ ಆಗಮನ ಮುಂದುವರೆದಿದ್ದು, ಪಾಕಿಸ್ತಾನದಿಂದ ಬಂದಿರುವ ವಧುವನ್ನು ನೋಡಲು ಎಲ್ಲರೂ ಮುಗಿಬೀಳುತ್ತಿದ್ದಾರೆ.

ವೀಸಾ ಸಿಗದ ಕಾರಣ ವಿಳಂಬ : ವೀಸಾ ಸಿಗದ ಕಾರಣ ವಧುವನ್ನು ಪಾಕಿಸ್ತಾನದಿಂದ ಭಾರತಕ್ಕೆ ಕರೆತರಲು ವಿಳಂಬವಾಗಿದೆ ಎಂದು ವರನ ಅಜ್ಜ ಭಾಲ್ಹೆ ಖಾನ್ ಮೆಹರ್ ತಿಳಿಸಿದ್ದಾರೆ. ಪಾಕಿಸ್ತಾನದಿಂದ ಭಾರತಕ್ಕೆ ಹೊರಡಲು ವಿಳಂಬವಾಗಲು ಇದೇ ಕಾರಣ ಎಂದಿದ್ದಾರೆ. ಪಾಕಿಸ್ತಾನದ ಮಗಳು ಈಗ ಭಾರತದ ಮಗನ ವಧು (ಬೇಗಮ್) ಆಗಿದ್ದಾಳೆ. ವಧು ಭಾರತಕ್ಕೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ವಧುವನ್ನು ಭಾರತಕ್ಕೆ ಕರೆತರಲು ವೀಸಾ ವಿಳಂಬ: ನಾನು ಪಾಕಿಸ್ತಾನಕ್ಕೆ ಹೋಗಿದ್ದೆ. ನಂತರ ಇಲ್ಲಿ ವಧುವಾಗಿ ಬಂದ ಫಾತಿಮಾ ನನಗೆ ತುಂಬಾ ಸೇವೆ ಸಲ್ಲಿಸಿದಳು. ಅದಕ್ಕೇ ಮೊಮ್ಮಗನಿಗೆ ಅವಳನ್ನು ಮದುವೆಮಾಡಿ ಸಂಬಂಧ ಗಟ್ಟಿ ಮಾಡಿಕೊಂಡೆ. ಇದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಓಡುತ್ತಿದ್ದ ರೈಲು ನಿಂತಿತು. ನಮ್ಮದು ಬಡ ಕುಟುಂಬ. ಇಲ್ಲಿಂದ ಮದುವೆ ಮೆರವಣಿಗೆ ಹೋಗಲು ನಮ್ಮ ಬಳಿ ಹಣವಿಲ್ಲ. ಹಾಗಾಗಿ ಆನ್‌ಲೈನ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮದುವೆ ಮಾಡಿದ್ದೇವೆ. ಮದುವೆಯ ನಂತರ ವಧುವನ್ನು ಭಾರತಕ್ಕೆ ಕರೆತರಲು ವೀಸಾ ವಿಳಂಬವಾಗಿತ್ತು. ಹೀಗಾಗಿ, ಪಾಕಿಸ್ತಾನದಿಂದ ಆಕೆಯನ್ನು ಕಳುಹಿಸಲು ವಿಳಂಬವಾಯಿತು ಎಂದಿದ್ದಾರೆ.

ಈ ವಿಶಿಷ್ಟ ಮದುವೆಯಿಂದ ಸ್ಫೂರ್ತಿ : ಜೋಧ್‌ಪುರ ನಗರದ ಈ ವಿಶಿಷ್ಟ ವಿವಾಹದಿಂದ ಅನೇಕ ಕುಟುಂಬಗಳು ಸ್ಫೂರ್ತಿ ಪಡೆದಿವೆ. ಇದೀಗ ಅನೇಕ ಕುಟುಂಬಗಳು ಆನ್‌ಲೈನ್ ಮದುವೆ ಮೂಲಕ ಸೊಸೆಯನ್ನು ತಮ್ಮ ಕುಟುಂಬಕ್ಕೆ ಕರೆತರಲು ತಯಾರಿ ನಡೆಸುತ್ತಿವೆ. ಪಾಕಿಸ್ತಾನಿ ವಧುವಿನ ಮಾವ ಸಿವಿಲ್ ಗುತ್ತಿಗೆದಾರ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿಶಿಷ್ಟ ವಿವಾಹದ ಉಸ್ತುವಾರಿ ವಹಿಸಿದ ವಧುವಿನ ಅಜ್ಜ ಭಾಲ್ಹೆ ಖಾನ್ ಮೆಹರ್ ಅವರು, ಕಾಲಕ್ಕೆ ತಕ್ಕಂತೆ ಸಂಪ್ರದಾಯಗಳಲ್ಲಿ ಬದಲಾವಣೆ ಅಗತ್ಯ ಎಂದು ಹೇಳುತ್ತಾರೆ.

ವಿಮಾನದ ವೆಚ್ಚ ಭರಿಸುವ ಸ್ಥಿತಿಯಲ್ಲಿ ನಾವಿರಲಿಲ್ಲ: ಕೊರೊನಾ ನಂತರ ಆನ್‌ಲೈನ್ ಈವೆಂಟ್‌ಗಳ ಪ್ರಸ್ತುತತೆ ಹೆಚ್ಚಾಗಿದೆ. ಕೋವಿಡ್​ ಅವಧಿಯ ನಂತರ ಪಾಕಿಸ್ತಾನಕ್ಕೆ ಪ್ರಯಾಣಿಸುವುದು ದುಬಾರಿ ಮತ್ತು ಅಪಾಯಕಾರಿಯಾಗಿದೆ. ಮೊಮ್ಮಗನ ಸಂಬಂಧ ಪಾಕಿಸ್ತಾನದಲ್ಲಿಯೇ ಫಿಕ್ಸ್ ಆಗಿದ್ದು, ಪಾಕಿಸ್ತಾನಕ್ಕೆ ಮೆರವಣಿಗೆ ಕೊಂಡೊಯ್ಯುವುದು ಹೇಗೆ? ಎಂಬ ಚಿಂತೆ ಹೆಚ್ಚಿತ್ತು. ಥಾರ್ ಎಕ್ಸ್ ಪ್ರೆಸ್ ಬಂದ್ ಆಗಿದ್ದು, ವಿಮಾನದ ವೆಚ್ಚ ಭರಿಸುವ ಸ್ಥಿತಿಯಲ್ಲಿ ನಾವು ಇರಲಿಲ್ಲ ಎಂದರು.

ಅಂತಹ ಪರಿಸ್ಥಿತಿಯಲ್ಲಿ ನಾನು ಆನ್‌ಲೈನ್ ಮದುವೆಯ ಕಲ್ಪನೆಯನ್ನು ಇಷ್ಟಪಟ್ಟೆ. ಆನ್‌ಲೈನ್‌ನಲ್ಲಿ ಮದುವೆ ನಡೆದಿದ್ದು, ಇದೀಗ ಮೊಮ್ಮಗ ಹಾಗೂ ಸೊಸೆ ಕೂಡ ವಾಘಾ ಗಡಿಯಿಂದ ಜೋಧಪುರ ತಲುಪಿದ್ದಾರೆ. ನಿಕಾಹ್ ನಂತರ ವೀಸಾ ಪಡೆದ ನಂತರ ಆಕೆಯ ಸಂಬಂಧಿಕರು ವಧುವನ್ನು ವಾಘಾ ಗಡಿಯವರೆಗೆ ಬಿಡಲು ಬಂದಿದ್ದರು. ನಂತರ ಅಲ್ಲಿಗೆ ಬಂದ ವರ ವಧುವನ್ನು ಕರೆದುಕೊಂಡು ಬಂದಿದ್ದಾನೆ ಎಂದರು.

ಪ್ರಧಾನಿ ಮೋದಿಗೆ ಮನವಿ :ವರನ ತಾತ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ಇದರ ಬಗ್ಗೆ ಮನ್ನಣೆ ಸಲ್ಲಿಸಿದ್ದಾರೆ. ವೀಸಾ ಪಡೆಯಲು 7 ರಿಂದ 8 ತಿಂಗಳು ತೆಗೆದುಕೊಳ್ಳುತ್ತದೆ ಮತ್ತು ಹಲವಾರು ಕಾರ್ಯವಿಧಾನಗಳನ್ನು ಅನುಸರಿಸಬೇಕು ಎಂದು ಭಾಲ್ಹೆ ಖಾನ್ ತಿಳಿಸಿದ್ದಾರೆ.

ಆದರೆ ಕೇಂದ್ರ ಸಚಿವರು ಶೇಖಾವತ್ ಅವರನ್ನು ಭೇಟಿ ಮಾಡಿ ವೀಸಾವನ್ನು ಶೀಘ್ರವಾಗಿ ದೊರಕಿಸುವಂತೆ ಮಾಡಿದ್ದಾರೆ. ಇಂದು ನನ್ನ ಮೊಮ್ಮಗನ ವಧು ಮನೆಗೆ ಬಂದಳು. ಭಾರತ ಮತ್ತು ಪಾಕಿಸ್ತಾನದ ಜನರ ಹೃದಯವನ್ನು ಸಂಪರ್ಕಿಸುವ ಇಂಡೋ ಪಾಕ್ ರೈಲು ಸೇವೆಯನ್ನು ಪುನರಾರಂಭಿಸುವಂತೆ ನಾನು ಮೋದಿ ಜಿ ಅವರನ್ನು ವಿನಂತಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ :ಮುಸ್ಲಿಂ ಯುವಕನೊಂದಿಗೆ ನಡೆಯಬೇಕಿದ್ದ ಮಗಳ ಮದುವೆ ರದ್ದುಗೊಳಿಸಿದ ಬಿಜೆಪಿ ನಾಯಕ

ABOUT THE AUTHOR

...view details