ರಾಜಸ್ಥಾನ/ಬಿಕಾನೆರ್ : ತಂದೆಯೋರ್ವ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವಿಷಾದಕರ ಘಟನೆ ಬಿಕಾನೆರ್ನ ಕೋಟ್‌ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಂದೆಯ ಜೊತೆ ವಿಷ ಸೇವಿಸಿದ ಪುತ್ರಿಯರು: ಇಬ್ಬರು ಸಾವು - suicide news
ಇಬ್ಬರು ಹೆಣ್ಣುಮಕ್ಕಳೊಂದಿಗೆ ತಂದೆಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಪರಿಣಾಮ ತಂದೆ ಹಾಗೂ ಓರ್ವ ಮಗಳು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಬಿಕಾನೆರ್‌ನಲ್ಲಿ ನಡೆದಿದೆ.
bikaner
ಇಬ್ಬರು ಹೆಣ್ಣುಮಕ್ಕಳೊಂದಿಗೆ ಮನೆಯಲ್ಲಿಯೇ ವೃದ್ಧ ತಂದೆ ವಿಷ ಸೇವಿಸಿದ್ದು, ಪರಿಣಾಮ ತಂದೆ ಮತ್ತು ಓರ್ವ ಮಗಳು ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಮಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇನ್ನು ಘಟನೆ ಕುರಿತು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಕೋಟ್‌ಗೇಟ್ ಪೊಲೀಸ್ ಅಧಿಕಾರಿ ಮನೋಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.