ಕರ್ನಾಟಕ

karnataka

ETV Bharat / bharat

ಪ್ರೀತಿಸಿ ಮದುವೆಯಾದ ಅನ್ಯ ಜಾತಿ ಜೋಡಿ.. ಆಕ್ರೋಶದಲ್ಲಿ ಯುವತಿಯ ಅಪ್ಪನಿಂದ ಯುವಕನ ತಂದೆಯ ಕೊಲೆ! - ಯುವತಿಯ ಅಪ್ಪನಿಂದ ಯುವಕನ ತಂದೆಯ ಕೊಲೆ

ಅನ್ಯ ಜಾತಿಯ ಜೋಡಿವೊಂದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಇದರಿಂದ ಆಕ್ರೋಶಗೊಂಡಿರುವ ಯುವತಿಯ ತಂದೆ ಯುವಕನ ಅಪ್ಪನನ್ನು ಕೊಲೆ ಮಾಡಿದ್ದಾನೆ.

Tamilnadu crime news
Tamilnadu crime news

By

Published : Mar 5, 2022, 4:08 PM IST

ಮಧುರೈ(ತಮಿಳುನಾಡು): ಪರಸ್ಪರ ಪ್ರೀತಿಸುತ್ತಿದ್ದ ಅನ್ಯ ಜಾತಿಯ ಜೋಡಿವೊಂದು ಕುಟುಂಬಸ್ಥರ ವಿರೋಧದ ಮಧ್ಯೆಯೂ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಯುವತಿಯ ಅಪ್ಪ ಯುವಕನ ತಂದೆಯನ್ನ ಕೊಲೆ ಮಾಡಿರುವ ಘಟನೆ ಮಧುರೈನಲ್ಲಿ ಬೆಳಕಿಗೆ ಬಂದಿದೆ.

ಯುವತಿಯ ಅಪ್ಪನಿಂದ ಯುವಕನ ತಂದೆಯ ಕೊಲೆ

ತಿದಿರ್​​ನಗರದಲ್ಲಿ ವಾಸವಾಗಿದ್ದ ರಾಮಚಂದ್ರನ್​ ಎಂಬುವರ ಪುತ್ರ ಶಿವಪ್ರಸಾದ್​ ಅದೇ ಪ್ರದೇಶದ ಹುಡುಗಿಯನ್ನ ಪ್ರೀತಿಸುತ್ತಿದ್ದನು. ಇವರಿಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಸಂಬಂಧ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹುಡುಗಿಯ ತಂದೆ ಹೇಳಿದ್ದನು. ಆದರೆ, ಮಾರ್ಚ್​​ 4ರಂದು ವಿರೋಧದ ಮಧ್ಯೆ ಕೂಡ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿರಿ:ಆಸ್ಪತ್ರೆಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ.. ಸ್ಥಳದಲ್ಲೇ ಚಿಕಿತ್ಸೆ ನೀಡಿ, ಜೀವ ಉಳಿಸಿದ ವೈದ್ಯರು

ಈ ಮದುವೆಯಿಂದ ಆಕ್ರೋಶಗೊಂಡಿರುವ ಹುಡುಗಿಯ ತಂದೆ ಸದೈಯಾಂಡಿ, ರಾಮಚಂದ್ರನ್​​ ಎಂಬಾತನನ್ನ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ರಾಮಚಂದ್ರನ್​ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details