ನವದೆಹಲಿ: ತಂದೆಯೊಬ್ಬ ತನ್ನ ಎರಡು ವರ್ಷದ ಮಗುವನ್ನು ಟೆರೇಸ್‌ನಿಂದ ಕೆಳಗೆ ಎಸೆದು, ಬಳಿಕ ತಾನೂ ಮಹಡಿಯಿಂದ ಕೆಳಗೆ ಹಾರಿರುವ ಆಘಾತಕಾರಿ ಘಟನೆ ದೆಹಲಿ ಕಲ್ಕಾಜಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ತಂದೆ ಮಗ ಇಬ್ಬರೂ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿ ತಂದೆ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಮಗುವನ್ನು ಎಸೆದ ತಂದೆ ಓಖ್ಲಾದ ಸಂಜಯ್ ಕಾಲೊನಿ ನಿವಾಸಿ ಮಾನಸಿಂಗ್ ಎಂಬುದು ತಿಳಿದು ಬಂದಿದೆ. ತನ್ನ ಮಡದಿ ಪೂಜಾಳ ಅಜ್ಜಿ ಮನೆಯ ಮೊದಲ ಮಹಡಿಯಿಂದ ಎರಡು ವರ್ಷದ ಮಗನನ್ನು ಎಸೆದು, ಬಳಿಕ ತಾನೂ ಕೆಳಗೆ ಜಿಗಿದಿದ್ದಾನೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಾಂಡೆ ಶನಿವಾರ ತಿಳಿಸಿದ್ದಾರೆ.