ಕರ್ನಾಟಕ

karnataka

ETV Bharat / bharat

ಇಬ್ಬರು ಮಕ್ಕಳ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ತಂದೆ - ಇಬ್ಬರು ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆ

ಇಬ್ಬರು ಮಕ್ಕಳ ಕೊಲೆ ಮಾಡಿ ಡೆತ್‌ ನೋಟ್​ ಬರೆದಿಟ್ಟಿರುವ ತಂದೆಯೊಬ್ಬ ತದನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

Father suicides
Father suicides

By

Published : Jan 2, 2021, 4:39 PM IST

ತಿರುವನಂತಪುರಂ (ಕೇರಳ):ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ತನ್ನಿಬ್ಬರು ಮಕ್ಕಳನ್ನು ಕೊಲೆ ಮಾಡಿ, ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತಿರುವನಂತಪುರಂದಲ್ಲಿ ನಡೆದಿದೆ.

ಜಿಲ್ಲೆಯ ನೈನಂಕೋಣಂದಲ್ಲಿ ಈ ಪ್ರಕರಣ ನಡೆದಿದೆ. 11 ಹಾಗೂ 9 ವರ್ಷದ ಇಬ್ಬರು ಮಕ್ಕಳು ಕೊಲೆಯಾದ ದುರ್ದೈವಿಗಳು.

ವೃತ್ತಿಯಲ್ಲಿ ಆಟೋ ಡ್ರೈವರ್​ ಆಗಿದ್ದ ಸಾಫೀರ್​ ಈ ಕೃತ್ಯವೆಸಗಿದ್ದಾನೆ. ತಾನೇ ಕೃತ್ಯ ಎಸಗಿರುವುದಾಗಿ ಆಟೋ ರಿಕ್ಷಾದಲ್ಲಿ ಮರಣ ಪತ್ರ ಬರೆದಿಟ್ಟಿದ್ದಾನೆ. ಮೃತದೇಹಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.

ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಸಾಫೀರ್​ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ. ಹೆಂಡತಿ ಜತೆ ಜಗಳ ಮಾಡಿದ ಬಳಿಕ ಈತ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದನು ಎಂದು ತಿಳಿದು ಬಂದಿದೆ.

ABOUT THE AUTHOR

...view details