ಕರ್ನಾಟಕ

karnataka

ETV Bharat / bharat

ಡಬಲ್ ಮರ್ಡರ್​​: ಮನೆಗೆ ನುಗ್ಗಿ ಕತ್ತು ಸೀಳಿ, ತಂದೆ-ಮಗನ ಹತ್ಯೆ - ಗಾಜಿಯಾಬಾದ್​ನಲ್ಲಿ ಡಬಲ್ ಮರ್ಡರ್

ಗಾಜಿಯಾಬಾದ್​ನ ಟ್ರೊನಿಕಾ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಂದೆ- ಮಗನ ಬರ್ಬರ ಕೊಲೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Father, son found murdered in UP's Ghaziabad
ಗಾಜಿಯಾಬಾದ್​ನಲ್ಲಿ ಡಬಲ್ ಮರ್ಡರ್​​: ಮನೆಗೆ ನುಗ್ಗಿ ಕತ್ತು ಸೀಳಿ, ತಂದೆ-ಮಗನ ಹತ್ಯೆ

By

Published : Sep 16, 2021, 1:47 PM IST

ಗಾಜಿಯಾಬಾದ್ (ಉತ್ತರ ಪ್ರದೇಶ): ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ 35 ವರ್ಷದ ವ್ಯಕ್ತಿ ಮತ್ತು ಆತನ ಎಂಟು ವರ್ಷದ ಮಗನನ್ನು ಕೊಂದು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಜಿಯಾಬಾದ್‌ನ ಟ್ರೊನಿಕಾ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಸಿಂ ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದವರನ್ನು ನಯಿಮುಲ್ ಮತ್ತು ಮಗ ಓವೈಸ್ ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ ಇಬ್ಬರೂ ತಮ್ಮ ಮನೆಯಲ್ಲಿ ಮಲಗಿದ್ದಾಗ ಅವರ ಗಂಟಲು ಸೀಳಿ ಕೊಲೆ ಮಾಡಲಾಗಿದೆ. ಕೊಲೆಯ ವೇಳೆ ನಯಿಮುಲ್ ಪತ್ನಿ ತವರು ಮನೆಗೆ ತೆರಳಿದ್ದಳು ಎಂದು ತಿಳಿದು ಬಂದಿದೆ.

ಕೊಲೆಯಾಗಿರುವ ಬಗ್ಗೆ ಬೆಳಗ್ಗೆ ಗ್ರಾಮಸ್ಥರಿಗೆ ಗೊತ್ತಾಗಿದ್ದು, ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ದರೋಡೆ ನಡೆಸುವ ಸಲುವಗಾಗಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ:ಮಿ.ಇಂಡಿಯಾ ಬಾಡಿ ಬಿಲ್ಡರ್ ಆತ್ಮಹತ್ಯಾ ಯತ್ನ: ಬಾಲಿವುಡ್ ನಟ ಸಾಹಿಲ್ ಖಾನ್ ವಿರುದ್ಧ ಕಿರುಕುಳ ಆರೋಪ

ABOUT THE AUTHOR

...view details