ತಿರುಚ್ಚಿ(ತಮಿಳುನಾಡು): ತಮಿಳುನಾಡು ಸರ್ಕಾರವು ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವನ್ನು ಇತ್ತೀಚೆಗೆ ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅಶ್ಲೀಲ ಬೆದರಿಕೆಗೆ ಒಳಗಾಗುವುದನ್ನು ತಡೆಯಲು ಸಹಾಯ ಕೇಂದ್ರಗಳು ಮತ್ತು ದೂರು ಸಂಖ್ಯೆಗಳನ್ನೂ ಸರ್ಕಾರ ಸ್ಥಾಪಿಸಿದೆ.
ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ಕಿರುಕುಳ.. ಎಚ್ಚೆತ್ತುಕೊಂಡ ಸರ್ಕಾರದಿಂದ ದಿಟ್ಟ ಹೆಜ್ಜೆ - ತಮಿಳುನಾಡು ಸರ್ಕಾರವು ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ
ಲಾರಿ ಚಾಲಕನಾಗಿದ್ದ ತಂದೆ ತನ್ನ 14 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ತಮಿಳುನಾಡಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಸರ್ಕಾರದ ಮಹತ್ವದ ಕ್ರಮ
ಇದರ ಬೆನ್ನಲ್ಲೇ ಇಂಥಹ ಘಟನೆಯೊಂದು ವರದಿಯಾಗಿದೆ. ಲಾರಿ ಚಾಲಕನಾಗಿದ್ದ ತಂದೆ ತನ್ನ 14 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದ ಚಾಲಕನ ಹೆಂಡತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸರ್ಕಾರ ಇಂಥಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಲೈಂಗಿಕ ಕಿರುಕುಳದ ದೂರುಗಳನ್ನು ಸರಿಯಾಗಿ ಪರಿಹರಿಸಲು ಮುಂದಾಗಿದೆ. ಹಾಗೆ ಅಂತಹ ಕೃತ್ಯಗಳಿಗೆ ಬಲಿಯಾದವರು ಸಹಾಯವಾಣಿ ಸಂಖ್ಯೆ 14417 ಗೆ ಕರೆ ಮಾಡಬಹುದಾಗಿದೆ.