ಕರ್ನಾಟಕ

karnataka

ETV Bharat / bharat

6 ತಿಂಗಳಿಂದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಂದೆ: ಪೋಕ್ಸೊ ಕಾಯ್ದೆಯಡಿ ಕೇಸ್​ ದಾಖಲು - gujurat man raped his daughter

ಗುಜರಾತ್‌ನ ರಾಜ್‌ಕೋಟ್​ನಲ್ಲಿ ತಂದೆ - ಮಗಳ ನಡುವಿನ ಪವಿತ್ರ ಸಂಬಂಧವನ್ನು ಹಾಳುಮಾಡುವ ಪ್ರಕರಣ ಬೆಳಕಿಗೆ ಬಂದಿದೆ. ದುಷ್ಟ ತಂದೆಯೊಬ್ಬ ತನ್ನ ಕಾಮಕ್ಕಾಗಿ 17 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ.

ಪುತ್ರಿಗೆ ತಂದೆ ಲೈಂಗಿಕ ಕಿರುಕುಳ
ಪುತ್ರಿಗೆ ತಂದೆ ಲೈಂಗಿಕ ಕಿರುಕುಳ

By ETV Bharat Karnataka Team

Published : Dec 2, 2023, 7:30 PM IST

ರಾಜ್​ಕೋಟ್ (ರಾಜಸ್ಥಾನ) :ಅಪ್ಪ- ಮಗಳ ಪವಿತ್ರ ಸಂಬಂಧಕ್ಕೆ ಈ ಪಾಪಿ ತಂದೆ ಅಪವಾದ. ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಅಪ್ರಾಪ್ತ ಮಗಳನ್ನು ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಜನ್ಮದಾತ ನಡೆಸುತ್ತಿರುವ ಅನಾಚಾರದ ವಿರುದ್ಧ ಮಗಳು ದೂರು ನೀಡಿದ್ದು, ವಿಷಯ ಕೇಳಿ ಪೊಲೀಸರೇ ಅಚ್ಚರಿಗೊಳಗಾಗಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಗುಜರಾತ್​ನ ರಾಜ್​ಕೋಟ್​​ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಹೇಯ ಪ್ರಕರಣ ಬೆಳಕಿಗೆ ಬಂದಿದೆ. 6 ತಿಂಗಳಿಂದ ತನ್ನ ಮೇಲೆ ನಡೆಯುತ್ತಿರುವ ಅನಾಚಾರದ ವಿರುದ್ಧ ಮಗಳು ದೂರು ದಾಖಲಿಸಿದ್ದಾಳೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪ್ರಕರಣದ ವಿವರ:ರಾಜ್​ಕೋಟ್​ನ ಹಳ್ಳಿಯೊಂದರ ನಿವಾಸಿಯಾದ 40 ವರ್ಷದ ಆರೋಪಿ ತಂದೆ ಎರಡು ಮದುವೆಯಾಗಿದ್ದು, ಮೊದಲ ಪತ್ನಿಗೆ 17 ವರ್ಷದ ಮಗಳಿದ್ದಾಳೆ. ಮೊದಲ ಪತ್ನಿ ತೀರಿಕೊಂಡ ಬಳಿಕ ಎರಡನೇ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಆದರೆ, ಎರಡನೇ ಪತ್ನಿ ಮತ್ತು ಮಕ್ಕಳು ಈತನಿಂದ ಪ್ರತ್ಯೇಕವಾಗಿದ್ದಾರೆ. ಎರಡನೆಯ ಹೆಂಡತಿ ತೊರೆದ ಬಳಿಕ ಪಾಪಿ ತಂದೆ ಅಜ್ಜ- ಅಜ್ಜಿಯ ಮನೆಯಲ್ಲಿದ್ದ 17 ವರ್ಷದ ಮೊದಲ ಪತ್ನಿಯ ಮಗಳನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಪತ್ನಿ ದೂರವಾದ ಬಳಿಕ ಈತ ತನ್ನ ಕಾಮದ ಕಣ್ಣುಗಳನ್ನು ಮಗಳ ಮೇಲೆ ನೆಟ್ಟಿದ್ದಾನೆ. ಮಗಳ ಮೇಲೆಯೇ ಅನಾಚಾರ ನಡೆಸಿದ್ದಾನೆ.

ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, 6 ತಿಂಗಳ ಹಿಂದೆ ಎರಡನೇ ತಾಯಿ ತೊರೆದ ಬಳಿಕ, ರಾತ್ರಿ ವೇಳೆ ಮಲಗಿದ್ದಾಗ ಇದ್ದಕ್ಕಿದ್ದಂತೆ ನನ್ನ ಬಳಿ ಬಂದ ತಂದೆ ಕೆಟ್ಟದಾಗಿ ಮುಟ್ಟಿದ. ವಿರೋಧಿಸಿದಾಗ ಸುಮ್ಮನಿರಲು ಹೇಳಿದ. ಅತ್ಯಾಚಾರವೆಸಗಿದ್ದಲ್ಲದೇ ಇದನ್ನು ಬಾಯ್ಬಿಟ್ಟರೆ, ನೆಟ್ಟಗಿರಲ್ಲ ಅಂತ ಧಮ್ಕಿ ಹಾಕಿದ. ಅಂದಿನಿಂದ ನನ್ನ ಮೇಲೆ ಕ್ರೌರ್ಯ ಮೆರೆಯುತ್ತಲೇ ಬಂದಿದ್ದಾನೆ ಎಂದು ಹೇಳಿದ್ದಾಳೆ.

ತಂದೆಯ ದುಷ್ಕೃತ್ಯ ಬಯಲು:ಈಚೆಗೆ ಆರೋಪಿ ತಂದೆ ಮಗಳಿಗೆ ಕಿರುಕುಳ ನೀಡುತ್ತಿದ್ದಾಗ ದುಷ್ಕೃತ್ಯ ಬಯಲಾಗಿದೆ. ಮನೆಯಲ್ಲಿ ಮಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾಗ ಇದನ್ನು ಕಂಡ ಅಜ್ಜಿ ಗದರಿಸಿದ್ದಾಳೆ. ಪಾಪಿ ತಂದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅಳುತ್ತಿದ್ದ ಮಗಳು ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಅಜ್ಜಿಗೆ ತಿಳಿಸಿದ್ದಾಳೆ. ಬಳಿಕ ಅಜ್ಜಿಯ ನೆರವಿನಿಂದ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪಟ್ನಾವ್ ಪೊಲೀಸರು ಆರೋಪಿ ತಂದೆಯ ವಿರುದ್ಧ ಐಪಿಸಿ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಬಂಧನಕ್ಕೆ ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ:ವಿಕಲಚೇತನ ಮಗಳ ಮೇಲೆ ರೇಪ್​.. ಕ್ರೂರಿ ತಂದೆಗೆ 107 ವರ್ಷ ಕಠಿಣ ಜೈಲು ಶಿಕ್ಷೆ

ABOUT THE AUTHOR

...view details