ವಿಕಾರಾಬಾದ್(ತೆಲಂಗಾಣ):ಕಾಮುಕ ತಂದೆಯೇ ಅಪ್ರಾಪ್ತ ವಯಸ್ಕ ಮಗಳ ಮೇಲೆ 3 ವರ್ಷ ನಿರಂತರ ಅತ್ಯಾಚಾರ ವೆಸಗಿದ ಘಟನೆ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಾರ್ಪಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನೆಲೆಸಿದ್ದು, ಮೂರು ಮದುವೆಯಾಗಿದ್ದ.
ಮೊದಲ ಪತ್ನಿಯಿಂದ ಬೇರ್ಪಟ್ಟು, ಎರಡನೇ ಮದುವೆ ಮಾಡಿಕೊಂಡಿದ್ದ, ಆದರೆ ಅವಳು ಮೃತಪಟ್ಟಿದ್ದರು. ಸದ್ಯ ಆರೋಪಿ ಮೂರನೇ ಪತ್ನಿಯೊಂದಿಗೆ ವಾಸವಿದ್ದು, ಪುತ್ರ ಮತ್ತು ಪುತ್ರಿ ಇದ್ದಾರೆ. ಆತ ಮೂರು ವರ್ಷಗಳಿಂದ ತನ್ನ ಮಗಳಿಗೆ (15) ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗ್ತಿದೆ.