ಪಲ್ನಾಡು(ಆಂಧ್ರಪ್ರದೇಶ): ಐದು ವರ್ಷದ ಮಗಳ ಮೇಲೆ ಕಾಮುಕ ತಂದೆಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ಪಲ್ನಾಡುದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನೂರ್ ಭಾಷಾ ಆದಂ ಶಾಫಿ 2016ರಲ್ಲಿ ಹುಸೇನ್ ಬಿ ಜೊತೆ ಮದುವೆ ಮಾಡಿಕೊಂಡಿದ್ದರು. ಇವರಿಗೆ ಒಂದು ಗಂಡು ಮಗು ಹಾಗೂ ಐದು ವರ್ಷದ ಹೆಣ್ಣು ಮಗುವಿದೆ. ಆದಂ ಶಾಫಿ, ಚಿಲಕಲೂರಿಪೇಟೆಯ ಕಲಾಮಂದಿರ ಸೆಂಟರ್ನಲ್ಲಿ ದಿನಸಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ.
ಪ್ರತಿ ದಿನ ಗಂಡು ಮಗು ತಾಯಿ ಜೊತೆ ಹಾಗೂ ಮಗಳು ತಂದೆಯ ಪಕ್ಕದಲ್ಲಿ ಮಲಗುತ್ತಿತ್ತು. ಒಂದು ದಿನ ಹೆಣ್ಣು ಮಗುವಿಗೆ ತಾಯಿ ಸ್ನಾನ ಮಾಡಿಸುತ್ತಿದ್ದ ವೇಳೆ ತನಗೆ ನೋವು ಆಗುತ್ತಿದೆ ಎಂದು ಹೇಳಿಕೊಂಡಿದ್ದು, ರಾತ್ರಿ ವೇಳೆ ತನ್ನನ್ನು ತಂದೆ ಪಕ್ಕದಲ್ಲಿ ಮಲಗಿಸಬೇಡ ಎಂದು ಹೇಳಿಕೊಂಡಿದೆ. ಈ ವೇಳೆ, ತಾಯಿ ಮಗುವಿಗೆ ಸಮಾಧಾನ ಮಾಡಿದ್ದಾಳೆ.
ಎಂದಿನಂತೆ ಎಲ್ಲರೂ ಭಾನುವಾರ ರಾತ್ರಿ ಊಟ ಮಾಡಿ ಮಗಲಿದ್ದಾರೆ. ಈ ವೇಳೆ ಗಂಡ ಹೊರಗೆ ಹೋಗಿ ಬರುವುದಾಗಿ ಹೇಳಿ ಮರಳಿ 11 ಗಂಟೆಗೆ ವಾಪಸ್ ಆಗಿದ್ದಾನೆ. ಈ ವೇಳೆ ಗಂಡ ಏನು ಮಾಡುತ್ತಾನೆಂದು ನೋಡಲು ಹುಸೇನ್ ಬಿ ಮಲಗಿರುವ ರೀತಿ ನಟನೆ ಮಾಡಿದ್ದಾಳೆ. ಹೆಂಡ್ತಿ ಮಲಗಿದ್ದನ್ನ ಕಂಡಿರುವ ಗಂಡ ಸೆಲ್ ಫೋನ್ನಲ್ಲಿ ನೀಲಿ ಚಿತ್ರ ನೋಡುತ್ತಾ, ಮಗಳಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ.