ವಿಜಯನಗರಂ(ಆಂಧ್ರ ಪ್ರದೇಶ): ಮಗಳನ್ನು ಕಣ್ಣ ರೆಪ್ಪೆಯಂತೆ ಕಾಪಾಡುವುದು ತಂದೆಯಾದವನ ಕರ್ತವ್ಯ. ಆದರೆ ಇಲ್ಲೊಬ್ಬ ಹೆತ್ತ ತಂದೆ ತನ್ನ ಮಗಳ ಮೇಲೆ ಅತ್ಯಾಚಾರಗೈದಿದ್ದಾನೆ. ಈ ಹೇಯ ಕೃತ್ಯ ವಿಜಯನಗರಂ ಜಿಲ್ಲೆಯ ಗಿರಿಜನ ವಾಸಿಸುವ ಗ್ರಾಮವೊಂದರಲ್ಲಿ ನಡೆದಿದೆ.
ಅಮಾನುಷ! ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ - ವಿಜಯನಗರಂ ಜಿಲ್ಲೆಯ ಗಿರಿಜನ ವಾಸಿಸುವ ಗ್ರಾಮವೊಂದರಲ್ಲಿ ತ್ತ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ
ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ತಂದೆಯೇ ಮಗಳ ಮೇಲೆ ಅತ್ಯಾಚಾರಗೈದ ಅಮಾನವೀಯ ಕೃತ್ಯ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಅತ್ಯಾಚಾರ
10ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಅತ್ತೆ ಮನೆಗೆ ಕರೆದೊಯ್ಯುತ್ತೇನೆಂದು ಪುಸಲಾಯಿಸಿದ ತಂದೆ ಆಕೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಇನ್ನು ನಡೆದ ಘಟನೆಯನ್ನು ಬಾಲಕಿ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಅವರ ಸಹಕಾರದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರು ದಾಖಲಿಸಿಕೊಂಡ ವಿಜಯನಗರ ಪೊಲೀಸರು ಆತನ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮೊದಲು ಆತನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.