ಕರ್ನಾಟಕ

karnataka

ETV Bharat / bharat

ಭಾರತದ ಹಸಿರು ಕ್ರಾಂತಿ ಪಿತಾಮಹ ಎಂಎಸ್ ಸ್ವಾಮಿನಾಥನ್ ಇನ್ನಿಲ್ಲ - ಭಾರತದ ಹಸಿರು ಕ್ರಾಂತಿಯ ಪಿತಾಮಹ

ms swaminathan: ಭಾರತೀಯ ಹಳ್ಳಿಗರ ಆರ್ಥಿಕ ಸ್ವಾವಲಂಬನೆ, ಕೃಷಿ ಕ್ಷೇತ್ರದ ಬೆಳವಣಿಗೆ, ರೈತರ ಹಿತ ಕಾಪಾಡುವಲ್ಲಿ ಶ್ರಮವಹಿಸಿದ ಹೆಮ್ಮೆಯ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರ ಡಾ ಎಂಎಸ್ ಸ್ವಾಮಿನಾಥನ್ ಇನ್ನಿಲ್ಲ.

Father of the Green Revolution in India  Father of the Green Revolution  ms swaminathan is no more  ms swaminathan died news  ಎಂಎಸ್ ಸ್ವಾಮಿನಾಥನ್ ನಿಧನ  ಹಸಿರು ಕ್ರಾಂತಿ ಪಿತಾಮಹ ಇನ್ನಿಲ್ಲ  ಹಸಿರು ಕ್ರಾಂತಿಯ ಹರಿಕಾರ ಡಾ ಎಂಎಸ್ ಸ್ವಾಮಿನಾಥನ್ ನಿಧನ  ಭಾರತೀಯ ಹಳ್ಳಿಗರ ಆರ್ಥಿಕ ಸ್ವಾವಲಂಬನೆ  ಕೃಷಿ ಕ್ಷೇತ್ರದ ಬೆಳವಣಿಗೆ  ಜಗತ್ತು ಕಂಡ ಶ್ರೇಷ್ಠ ಕೃಷಿ ವಿಜ್ಞಾನ  ಭಾರತದ ಹಸಿರು ಕ್ರಾಂತಿಯ ಪಿತಾಮಹ  ಮೊಂಕೊಂಬ ಸಾಂಬಶಿವನ್ ಸ್ವಾಮಿನಾಥನ್
ಹಸಿರು ಕ್ರಾಂತಿ ಪಿತಾಮಹ ಇನ್ನಿಲ್ಲ

By ETV Bharat Karnataka Team

Published : Sep 28, 2023, 12:42 PM IST

Updated : Sep 28, 2023, 12:53 PM IST

ಚೆನ್ನೈ, ತಮಿಳುನಾಡು: ಜಗತ್ತು ಕಂಡ ಶ್ರೇಷ್ಠ ಕೃಷಿ ವಿಜ್ಞಾನಿ, ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಪ್ರಖ್ಯಾತರಾದ ಡಾ. ಮೊಂಕೊಂಬ ಸಾಂಬಶಿವನ್ ಸ್ವಾಮಿನಾಥನ್ ಅವರು ಚೆನ್ನೈನಲ್ಲಿ ನಿಧರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಸ್ವಾಮಿನಾಥನ್ ಅವರು ರೈತರ ಆದಾಯ ದ್ವಿಗುಣ, ಬೇಸಾಯದತ್ತ ಯುವಕರನ್ನು ಸೆಳೆಯುವುದು, ಶೂನ್ಯ ಬಂಡವಾಳ ಕೃಷಿ, ಭವಿಷ್ಯದ ಬೇಸಾಯದ ಪದ್ಧತಿ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಚೆನ್ನೈನಲ್ಲಿ ವಾಸವಿದ್ದ ಅವರು ವಯೋಸಹಜವಾಗಿ ಇಂದು ಸಾವನ್ನಪ್ಪಿದ್ದಾರೆ. ಎಂಎಸ್ ಸ್ವಾಮಿನಾಥನ್ ಅವರ ಪತ್ನಿ ಮಿನಾ ಸ್ವಾಮಿನಾಥನ್​ ಅವರು ಕಳೆದ ವರ್ಷ ನಿಧನರಾಗಿದ್ದರು. ಸ್ವಾಮಿನಾಥನ್​ ಅವರು ಈಗ ಮೂವರು ಪುತ್ರಿಯರಾದ ಸೌಮ್ಯ ಸ್ವಾಮಿನಾಥನ್, ಮಥುರಾ ಸ್ವಾಮಿನಾಥನ್ ಮತ್ತು ನಿತ್ಯ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ.

ಆಗಸ್ಟ್ 7, 1925 ರಂದು ಕುಂಭಕೋಣಂ ಜಿಲ್ಲೆಯಲ್ಲಿ ಜನಿಸಿದ ಸ್ವಾಮಿನಾಥನ್ ಅವರು ತಮ್ಮ ಸ್ವಂತ ಊರಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ವೈದ್ಯರಾಗಲು ಬಯಸಿದ್ದರು. ಆದರೆ 1943 ರಲ್ಲಿ ಬಂಗಾಳದಲ್ಲಿ ಕ್ಷಾಮವು ಅವರ ಜೀವನದ ಗುರಿಯನ್ನು ಬದಲಿಸಿತು. ಸುಮಾರು 30 ಲಕ್ಷ ಜನ ಹಸಿವಿನಿಂದ ಸಾವನ್ನಪ್ಪಿದ್ದನ್ನು ಕಂಡು ಕೃಷಿ ಸಂಶೋಧನೆಯಲ್ಲಿ ತೊಡಗಲು ತಮ್ಮ ಹಾದಿಯನ್ನು ತಿರುಗಿಸಿದರು.

ಅವರು ಕೇರಳದ ತಿರುವನಂತಪುರಂನ ಮಹಾರಾಜ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ಮದ್ರಾಸ್ ಕೃಷಿ ಕಾಲೇಜಿನಲ್ಲಿ ಕೃಷಿ ವಿಜ್ಞಾನವನ್ನು ಪೂರ್ಣಗೊಳಿಸಿದರು. UPSC ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ ಸಿಕ್ಕಿದ್ದ IPS ಅವಕಾಶವನ್ನು ತಿರಸ್ಕರಿಸಿ UNESCO ದಿಂದ ಸ್ಕಾಲರ್ ಶಿಪ್ ಪಡೆದು ಕೃಷಿ ಸಂಶೋಧನೆಯಲ್ಲಿ ತೊಡಗಿದರು. ಅವರು ಭತ್ತ, ಗೋಧಿ ಮತ್ತು ಗೆಣಸಿನ ಮೇಲೆ ಪ್ರಮುಖ ಸಂಶೋಧನೆಗಳನ್ನು ನಡೆಸಿದರು.

ಎಂಎಸ್​ ಸ್ವಾಮಿನಾಥನ್​ ಅವರು ನಮ್ಮ ಪರಿಸರಕ್ಕೆ ಸೂಕ್ತವಾದ ಹೆಚ್ಚಿನ ಇಳುವರಿ ನೀಡುವ ಬೀಜಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ರೈತರಲ್ಲಿ ಅವುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಹಸಿರು ಕ್ರಾಂತಿಗೆ ಕಾರಣರಾದರು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು 1979ರಲ್ಲಿ ಕೇಂದ್ರ ಕೃಷಿ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಎಂಎಸ್ ಸ್ವಾಮಿನಾಥನ್ ಅವರು 1988 ರಿಂದ ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಂತರಾಷ್ಟ್ರೀಯ ಕೇಂದ್ರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ರಾಷ್ಟ್ರೀಯ ರೈತ ಆಯೋಗದ ಅಧ್ಯಕ್ಷರು, ಭಾರತೀಯ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಕೇಂದ್ರದ ಮಹಾನಿರ್ದೇಶಕ ಸೇರಿದಂತೆ ಮುಂತಾದ ದೇಶ ಮತ್ತು ವಿದೇಶಗಳಲ್ಲಿ ಅನೇಕ ಹುದ್ದೆಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ.

ಓದಿ:ಯುವಕರು ಕೃಷಿಯತ್ತ ಒಲವು ತೋರದಿದ್ದರೆ ಬೇಸಾಯಕ್ಕೆ ಉಳಿಗಾಲವಿಲ್ಲ: ಹಸಿರು ಕ್ರಾಂತಿ ಪಿತಾಮಹ

ಲಾಕ್​ಡೌನ್​ ಸಮಯದಲ್ಲಿ ಸರ್ಕಾರಕ್ಕೆ ಸಲಹೆ:ಲಾಕ್​ಡೌನ್​ ಸಮಯದಲ್ಲಿ ಸ್ವಾಮಿನಾಥನ್​ ಅವರು ರೈತರ ಪರವಾಗಿ ದನಿಯೆತ್ತಿದ್ದರು. ಲಾಕ್​ಡೌನ್​​ನಿಂದ ದೇಶಾದ್ಯಂತ ಉಂಟಾಗಿರುವ ನಿರ್ಬಂಧಗಳಿಂದ ತೊಂದರೆಗೆ ಸಿಲುಕಿರುವ ರೈತರ ನೆರವಿಗೆ ತಕ್ಷಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಬೇಕೆಂದು ಪ್ರಮುಖ ಕೃಷಿ-ಆರ್ಥಿಕ ತಜ್ಞ ಹಾಗೂ ಪ್ರಾಧ್ಯಾಪಕ ಎಂ.ಎಸ್.‌ ಸ್ವಾಮಿನಾಥನ್‌ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಅಷ್ಟೇ ಅಲ್ಲ ಆ ಸಮಯದಲ್ಲಿ ಅವರು ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದ್ದರು.

Last Updated : Sep 28, 2023, 12:53 PM IST

ABOUT THE AUTHOR

...view details