ಪೂರ್ವ ಮದಿನಿಪುರ (ಪಶ್ಚಿಮ ಬಂಗಾಳ):ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮದಿನಿಪುರದಲ್ಲಿ ಭಾನುವಾರ ನಡೆಸಿದ ರ‍್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಸಿಸಿರ್ ಅಧಿಕಾರಿ ಭಾಗವಹಿಸಿದ್ದರು.
'ಬಂಗಾಳವನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಿ. ನಾವು ನಿಮ್ಮೊಂದಿಗಿದ್ದೇವೆ, ನಮ್ಮ ಕುಟುಂಬವೂ ನಿಮ್ಮೊಂದಿಗಿದೆ. ಜೈ ಶ್ರೀರಾಮ್, ಜೈ ಭಾರತ್ ಎಂದು ಸಂಸದ ಸಿಸಿರ್ ಅಧಿಕಾರಿ ರ‍್ಯಾಲಿಯಲ್ಲಿ ಭಾಷಣ ಮಾಡುವಾಗ ಹೇಳಿದ್ದಾರೆ.