ಕರ್ನಾಟಕ

karnataka

ETV Bharat / bharat

ಸೈಕೋನಂತೆ ವರ್ತಿಸಿ ಪುತ್ರನ ಪ್ರಾಣ ತೆಗೆದ ಪಾಪಿ ತಂದೆ - son died by father

ಇಂದು ಮುಂಜಾನೆ ಸೈಕೋ ತಂದೆಯೊಬ್ಬ ತನ್ನಿಬ್ಬರು ಪುತ್ರರಾದ ಮಲ್ಲಿಕಾರ್ಜುನ್​​​ ಮತ್ತು ಪ್ರಣಯ್​​​ನ ಕೈಗಳನ್ನು ಕೊಯ್ದಿದ್ದಾನೆ. ಈ ಘಟನೆಯಲ್ಲಿ ಹಿರಿಯ ಮಗ ಮಲ್ಲಿಕಾರ್ಜುನ್​​ ಸಾವನ್ನಪ್ಪಿದ್ದಾನೆ. ಇನ್ನೂ ಪ್ರಣಯ್​ ಪ್ರಾಣ ಉಳಿಸುವಲ್ಲಿ ಕುಟುಂಬಸ್ಥರು ಯಶಸ್ವಿಯಾಗಿದ್ದಾರೆ.

telangana murder case
ಸೈಕೋನಂತೆ ವರ್ತಿಸಿ ಪುತ್ರನ ಪ್ರಾಣ ತೆಗೆದ ತಂದೆ

By

Published : Apr 15, 2021, 7:51 PM IST

ತೆಲಂಗಾಣ: ತನ್ನ ಇಬ್ಬರು ಗಂಡು ಮಕ್ಕಳ ಮೇಲೆ ತಂದೆಯೊಬ್ಬ ಸೈಕೋನಂತೆ ವರ್ತಿಸಿದ್ದು, ಪುತ್ರನೊಬ್ಬ ಮೃತಪಟ್ಟಿರುವ ಘಟನೆ ತೆಲಂಗಾಣದ ನಾಗರ್​​ಕುರ್ನೂಲ್​​ನ ಮಂತತಿಯಲ್ಲಿ ನಡೆದಿದೆ.

ಆರೋಪಿ ಶಿವಶಂಕರ್​ನ ಪತ್ನಿ 3 ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು, ಇನ್ನು ಮಾನಸಿಕ ಅಸ್ವಸ್ಥರಂತೆ ವರ್ತಿಸುವ ಇವರು, ಮದ್ಯದ ಚಟ ಸಹ ಅಂಟಿಸಿಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ.

ಕೊಲೆ ಪ್ರಕರಣ!

ಇಂದು ಮುಂಜಾನೆ ಇದ್ದಕ್ಕಿದ್ದಂತೆ ಸೈಕೋ ತರ ಆಡಿದ ಇವರು ತನ್ನಿಬ್ಬರು ಪುತ್ರರಾದ ಮಲ್ಲಿಕಾರ್ಜುನ್​​​ ಮತ್ತು ಪ್ರಣಯ್​​​ ಮೇಲೆ ಹಲ್ಲೆ ಮಾಡಿ, ಕೈಗಳನ್ನು ಕೊಯ್ದಿದ್ದಾರೆ. ಈ ಘಟನೆಯಲ್ಲಿ ಹಿರಿಯ ಮಗ ಮಲ್ಲಿಕಾರ್ಜುನ್​​ ಸಾವನ್ನಪ್ಪಿದ್ದಾನೆ. ಇನ್ನೂ ಪ್ರಣಯ್​ ಪ್ರಾಣ ಉಳಿಸುವಲ್ಲಿ ಕುಟುಂಬಸ್ಥರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಅತ್ತೆ-ಮಾವನಿಗೆ ಚಾಕುವಿನಿಂದ ಇರಿದ ಅಳಿಯ... ಕಾರಣವೇನು ಗೊತ್ತಾ?

ಸದ್ಯ ಪ್ರಣಯ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

raw copy - ಸರ್​ ಚೆಕ್​ ಮಾಡಿ

ABOUT THE AUTHOR

...view details