ಉತ್ತರಕಾಶಿ(ಉತ್ತರಾಖಂಡ) :ಕಟ್ಟಿಕೊಂಡ ಹೆಂಡತಿ ಜೊತೆ ಜಗಳ ಮಾಡಿರುವ ಗಂಡನೋರ್ವ ಆಕ್ರೋಶದಲ್ಲಿ ನವಜಾತ ಹೆಣ್ಣು ಮಗುವನ್ನ ನೆಲದ ಮೇಲೆ ಎಸೆದು ಕೊಂದಿರುವ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೆಣ್ಣು ಮಗುವಿಗೆ ತಾಯಿ ಹಾಲುಣಿಸುತ್ತಿದ್ದ ಸಂದರ್ಭದಲ್ಲಿ ಆಕೆಯ ಜೊತೆ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಪತಿ, ನವಜಾತ ಶಿಶುವನ್ನ ನೆಲದ ಮೇಲೆ ಎಸೆದಿದ್ದಾನೆ. ಪರಿಣಾಮ ಅದು ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಇದರ ಬೆನ್ನಲ್ಲೇ ಆರೋಪಿಯ ಬಂಧನ ಮಾಡಲಾಗಿದೆ.