ಧನ್ಬಾದ್(ಜಾರ್ಖಂಡ್):ಸೊಸೆಯಿಂದ ಅತ್ತೆಗೆ, ಅತ್ತೆಯಿಂದ ಸೊಸೆಗೆ ಕಿರುಕುಳ ನೀಡುವಂತಹ ಪ್ರಕರಣ ಮೇಲಿಂದ ಮೇಲೆ ಬೆಳಕಿಗೆ ಬರ್ತಾನೆ ಇರ್ತವೆ. ಆದರೆ, ಜಾರ್ಖಂಡ್ನ ಧನ್ಬಾದ್ನಲ್ಲಿ ನಡೆದ ಘಟನೆಯೊಂದು ಇದಕ್ಕೆ ವಿರುದ್ಧವಾಗಿದೆ. ಮುದ್ದಿನ ಸೊಸೆಯ ಪ್ರಾಣ ಉಳಿಸಲು ಹೋಗಿ ಅತ್ತೆ ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದಾಳೆ.
ಜಾರ್ಖಂಡ್ನ ಧನ್ಬಾದ್ನಲ್ಲಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಶಾಕ್ ತಗುಲಿದ್ದ ಸೊಸೆ ಬದುಕಿಸಲು ಹೋದ ಅತ್ತೆಗೂ ಕರೆಂಟ್ ಹೊಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನು ಸೊಸೆ ಕೂಡ ಘಟನೆ ವೇಳೆ ಪ್ರಾಣ ಕಳೆದುಕೊಂಡಿದ್ದಾಳೆ.
ಏನಿದು ಪ್ರಕರಣ?
ದನ್ಭಾದ್ನ ಪುಟ್ಕಿ ಪೊಲೀಸ್ ಠಾಣೆಯ ಕರಂದ್ನಲ್ಲಿ ನಡೆದಿರುವ ಘಟನೆ ಇದಾಗಿದೆ. 70 ವರ್ಷದ ಚಮರ್ ಹಾಗೂ 35 ವರ್ಷದ ಗುಡಿಯಾ ದೇವಿ ವಿದ್ಯುತ್ ಶಾಕ್ನಿಂದಾಗಿ ಮೃತಪಟ್ಟಿದ್ದಾರೆ. ಕಬ್ಬಿಣದ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದ ಟಿವಿ ಆನ್ ಮಾಡಲು ಗುಡಿಯಾ ದೇವಿ ಹೋಗಿದ್ದಾಳೆ.
ಈ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನ ಗಮನಿಸಿರುವ ಅತ್ತೆ ಚಮರ್, ಸೊಸೆ ಬದುಕಿಸಲು ಓಡಿ ಹೋಗಿ ಆಕೆಯನ್ನ ಮುಟ್ಟಿದ್ದಾಳೆ. ಪರಿಣಾಮ ಆಕೆಗೂ ವಿದ್ಯುತ್ ಶಾಕ್ ತಗುಲಿದೆ. ಹೀಗಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿರಿ: NAMO ಬ್ಲಾಗ್ನಲ್ಲಿ ವಿಶೇಷ ಸುಧಾರಣೆ ಯೋಜನೆ: 23 ರಾಜ್ಯಗಳಿಗೆ 1.06 ಲಕ್ಷ ಕೋಟಿ ಹೆಚ್ಚುವರಿ ಸಾಲ ಎಂದ Modi
ಗುಡಿಯಾಗೆ ಮೂರು ವರ್ಷದ ಮಗುವಿದ್ದು, ಅದು ಅಳಲು ಶುರು ಮಾಡಿದಾಗ ನೆರೆ ಮನೆಯವರು ಬಂದು ನೋಡಿದ್ದಾರೆ. ಘಟನೆ ಬಗ್ಗೆ ಈಗಾಗಲೇ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಶವಗಳನ್ನ ಮರಣೋತ್ತರ ಪರೀಕ್ಷೆಗೋಸ್ಕರ ರವಾನೆ ಮಾಡಿದ್ದಾರೆ.