ಚೆನ್ನೈ(ತಮಿಳುನಾಡು):ಮಗಳನ್ನು ರಕ್ಷಿಸಲು ಹೋಗಿ ತಂದೆ ನೀರುಪಾಲಾಗಿರುವ ಮನಕಲಕುವ ಘಟನೆ ಚೆನ್ನೈ ಬಳಿಯ ಬೆಸಂಟ್ ನಗರದ ಬೀಚ್ ಬಳಿ ನಡೆದಿದೆ.
ಮಗಳ ರಕ್ಷಿಸಲು ಹೋಗಿ ಸಮುದ್ರಪಾಲಾದ ತಂದೆ ಬಾಲಾಜಿ, ಮೃತಪಟ್ಟ ವ್ಯಕ್ತಿಯಾಗಿದ್ದು, ತನ್ನ 11 ವರ್ಷದ ಮಗಳು ರೇವತಿಗೆ ಸರ್ಫಿಂಗ್ ಕಲಿಸುವ ಸಲುವಾಗಿ ಸಮುದ್ರದ ಬಳಿ ಕರೆದೊಯ್ದಿದ್ದನು. ಕೆಲವು ವರ್ಷಗಳಿಂದ ಆಕೆ ಸರ್ಫಿಂಗ್ ಕಲಿಯುತ್ತಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದಿದ್ದಾಳೆ.
ಬಾಲಕಿಯ ತಂದೆ ಬಾಲಾಜಿ ಮೃತದೇಹ ಈ ವೇಳೆ ತಂದೆ ಬಾಲಾಜಿ ಆಕೆಯನ್ನು ರಕ್ಷಿಸಲು ಸಮುದ್ರಕ್ಕೆ ಜಿಗಿದಿದ್ದು, ದೊಡ್ಡ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬಾಲಕಿ ರೇವತಿಯನ್ನು ಅಲ್ಲಿನ ಮೀನುಗಾರರು ರಕ್ಷಿಸಿದ್ದು, ಬಾಲಾಜಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ.
ಈಗ ಸದ್ಯಕ್ಕೆ ಬಾಲಾಜಿಯ ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.