ಕರ್ನಾಟಕ

karnataka

ETV Bharat / bharat

45 ನಿಮಿಷದ ಅಂತರದಲ್ಲಿ ಕೋವಿಡ್​ನಿಂದ ತಂದೆ-ತಾಯಿ ಸಾವು: ಅಂತ್ಯಕ್ರಿಯೆ ನಡೆಸಿದ ಹೆಣ್ಣು ಮಕ್ಕಳು

ಮಹಾಮಾರಿ ಕೊರೊನಾದಿಂದ ತಂದೆ-ತಾಯಿ ಸಾವನ್ನಪ್ಪಿದ್ದಾರೆ. ಇವರ ಅಂತ್ಯಕ್ರಿಯೆಗೆ ಯಾರೂ ಮುಂದಾಗದ ಹಿನ್ನೆಲೆ ಸ್ವತಃ ಅವರ ಹೆಣ್ಣು ಮಕ್ಕಳೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ರಾಜಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

daughters perform last rites in alwar
daughters perform last rites in alwar

By

Published : May 5, 2021, 3:29 PM IST

Updated : May 5, 2021, 3:42 PM IST

ಅಲ್ವಾರ್​(ರಾಜಸ್ಥಾನ):ಮಹಾಮಾರಿ ಕೊರೊನಾ ವೈರಸ್​​ಗೆ ಪ್ರತಿದಿನ ಸಾವಿರಾರು ಜನರು ಬಲಿಯಾಗುತ್ತಿದ್ದು, ಕೆಲವೊಂದು ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಇಂತಹ ಘಟನೆವೊಂದು ಅಲ್ವಾರ್​ದ ಶವಾಗಾರದಲ್ಲಿ ಕಂಡುಬಂದಿದೆ.

ತಂದೆ-ತಾಯಿ ಅಂತ್ಯಕ್ರಿಯೆ ನೆರವೇರಿಸಿದ ಹೆಣ್ಣು ಮಕ್ಕಳು

ಡೆಡ್ಲಿ ವೈರಸ್​ನಿಂದ 45 ನಿಮಿಷಗಳ ಅಂತರದಲ್ಲಿ ತಂದೆ-ತಾಯಿ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ನಡೆಸಲು ಬೇರೆಯವರು ಮುಂದೆ ಬರದ ಕಾರಣ ಅವರ ಹೆಣ್ಣು ಮಕ್ಕಳೇ ಈ ಕಾರ್ಯವನ್ನು ನೆರವೇರಿಸಿದ್ದಾರೆ.

ಕೋವಿಡ್​ನಿಂದ ಸಾವನ್ನಪ್ಪಿದ ತಾಯಿಯ ಅಂತ್ಯಕ್ರಿಯೆ ನಡೆಸಲು ಶವಾಗಾರಕ್ಕೆ ಹೋಗುತ್ತಿದ್ದಂತೆ ತಂದೆ ಸಹ ಸಾವನ್ನಪ್ಪಿರುವ ಮಾಹಿತಿ ಬಂದಿದೆ. ಈ ಸುದ್ದಿಯಿಂದ ಹೆಣ್ಣು ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ಕೋವಿಡ್ ಭಯದಿಂದ ಅಂತಿಮ ವಿಧಿ-ವಿಧಾನ ನಡೆಸಲು ಬೇರೆ ಯಾರೂ ಸಹ ಮುಂದೆ ಬಂದಿಲ್ಲ. ಹೀಗಾಗಿ ಹೆಣ್ಣು ಮಕ್ಕಳೇ ತಂದೆ-ತಾಯಿಯ ಅಂತ್ಯಸಂಸ್ಕಾರ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಉದಯಿಸಿದ 'ಸೂರ್ಯ'.. ಮೇ 7ರಂದು ಸಿಎಂ ಆಗಿ ಸ್ಟಾಲಿನ್ ಪದಗ್ರಹಣ

ರಾಜಸ್ಥಾನದಲ್ಲಿ ಕೊರೊನಾ ಎರಡನೇ ಹಂತದ ಅಲೆ ಜೋರಾಗಿದ್ದು, ಪ್ರತಿದಿನ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾಗಿರುವ 75 ವರ್ಷದ ರಾಜೇಂದ್ರ ಕುಮಾರ್​ ಕೋವಿಡ್​ನಿಂದಾಗಿ ಅಲ್ವಾರ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದರ ಬೆನ್ನಲ್ಲೇ 70 ವರ್ಷದ ಪತ್ನಿ ಸುಮನ್​ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಮಂಗಳವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ನಡೆಸಲು ಶವಾಗಾರಕ್ಕೆ ಹೋಗುತ್ತಿದ್ದಂತೆ ಅವರ ಪತಿ ಸಹ ಸಾವನ್ನಪ್ಪಿದ್ದಾನೆಂದು ಆಸ್ಪತ್ರೆಯಿಂದ ಕರೆ ಬಂದಿದೆ. ಹೀಗಾಗಿ ಇಬ್ಬರನ್ನ ಒಟ್ಟಿಗೆ ಅಂತ್ಯಕ್ರಿಯೆ ನಡೆಸಲಾಗಿದೆ.

Last Updated : May 5, 2021, 3:42 PM IST

ABOUT THE AUTHOR

...view details