ಕರ್ನಾಟಕ

karnataka

ETV Bharat / bharat

ಮೂವರು ಹೆಣ್ಣು ಮಕ್ಕಳ ಕತ್ತಿನ ಮೇಲೆ ಪ್ರಹಾರ ಮಾಡಿ ಆತ್ಮಹತ್ಯೆಗೆ ಶರಣಾದ ತಂದೆ.. - Kottayam Medical College

ತನ್ನ ಮೂವರು ಹೆಣ್ಣು ಮಕ್ಕಳ ಕತ್ತು ಸೀಳಿ ತರುವಾಯ ತಂದೆ ನೇಣಿಗೆ ಶರಣಾಗಿರುವ ಘಟನೆ ಕೇರಳದ ಕೊಟ್ಟಾಯಂನ ರಾಮಪುರಂನಲ್ಲಿ ನಡೆದಿದೆ.

ರಾಮಪುರಂನ ನಿವಾಸಿ ಜೋಮೋನ್
ರಾಮಪುರಂನ ನಿವಾಸಿ ಜೋಮೋನ್

By ETV Bharat Karnataka Team

Published : Sep 4, 2023, 6:20 PM IST

Updated : Sep 4, 2023, 6:43 PM IST

ಕೊಟ್ಟಾಯಂ (ಕೇರಳ) :ಇಲ್ಲಿನ ರಾಮಪುರಂ ಬಳಿ ತನ್ನ ಮೂರು ಹೆಣ್ಣು ಮಕ್ಕಳ ಕತ್ತಿನ ಮೇಲೆ ದಾಳಿ ಮಾಡಿ, ಆ ಬಳಿಕ ಆರೋಪಿ ತಂದೆ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯು ನಿನ್ನೆ (ಸೆಪ್ಟೆಂಬರ್​ -3-2023) ಮಧ್ಯರಾತ್ರಿ ಜರುಗಿದೆ ಎಂಬುದಾಗಿ ತಿಳಿದುಬಂದಿದೆ. ರಾಮಪುರಂನ ನಿವಾಸಿ ಜೋಮೋನ್​ (40) ತನ್ನ ಮಕ್ಕಳ ಕತ್ತು ಸೀಳಿದ ನಂತರ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಕೃತ್ಯದ ವೇಳೆ ಹೆಣ್ಣು ಮಕ್ಕಳು ಜೋರಾಗಿ ಕಿರುಚಿದ್ದರಿಂದಾಗಿ ಸಾರ್ವಜನಿಕರಿಗೆ ವಿಷಯ ತಿಳಿದಿದೆ. ಗಾಯಗೊಂಡ ಹೆಣ್ಣು ಮಕ್ಕಳು 13, 10, ಹಾಗೂ 7 ವರ್ಷದವರಾಗಿದ್ದಾರೆ. ಈಗಾಗಲೇ ಇವರೆಲ್ಲರನ್ನೂ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಿರಿಯ ಮಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಇನ್ನಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜೋಮೋನ್​ ನೇಣಿಗೆ ಶರಣಾಗಿ ಮೃತಪಟ್ಟ ಸ್ಥಳಕ್ಕೆ ರಾಮಪುರಂನ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾಹಿತಿ ಪ್ರಕಾರ, ಕಳೆದ ಒಂದೂವರೆ ವರ್ಷದ ಹಿಂದೆ ಜೋಮೋನ್ ಹೆಂಡತಿ, ಇವರು ಹಾಗೂ ಮೂವರು ಮಕ್ಕಳನ್ನು ಬಿಟ್ಟು ಹೋಗಿದ್ದಳು. ಇದಾದ ನಂತರ ಮೂರು ಮಕ್ಕಳ ಪಾಲನೆಯನ್ನು ಜೋಮೋನ್​ ನೋಡಿಕೊಳ್ಳುತ್ತಿದ್ದರು. ಅಪರಾಧಕ್ಕೆ ನಿಜವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ವ್ಯಕ್ತಿ ಆಲ್ಕೋಹಾಲ್​​ ಕುಡಿದು ಈ ಕೃತ್ಯ ಎಸಗಿರಬಹುದು ಎಂದು ಅನುಮಾನಿಸಲಾಗಿದೆ. ಕೌಟುಂಬಿಕ ಸಮಸ್ಯೆಗಳೆನಾದರೂ ಕಾರಣವಿರಬಹುದೆ? ಎಂಬ ಕುರಿತಾಗಿ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

7 ತಿಂಗಳ ಮಗು ಹತ್ಯೆ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆಗೈದು ಪತಿ ಆತ್ಮಹತ್ಯೆ: 38 ವರ್ಷದ ವ್ಯಕ್ತಿಯೋರ್ವ ಏಳು ತಿಂಗಳ ಮಗುವನ್ನು ಕೊಲೆಗೈದು, ಕಟ್ಟಿಕೊಂಡ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಕೊನೆಗೂ ತಾನು ಆತ್ಮಹತ್ಯೆಗೆ (ಸೆಪ್ಟೆಂಬರ್-​ 24-2021) ಶರಣಾಗಿದ್ದ ಘಟನೆ ಕಣ್ಣೂರಿನಲ್ಲಿ ನಡೆದಿತ್ತು. ಗಂಡನಿಂದ ತೀವ್ರ ಸ್ವರೂಪದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಅಂಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ ಅವರ ಆರೋಗ್ಯಸ್ಥಿತಿ ಗಂಭೀರವಾಗಿತ್ತು.

ಯಾವ ಕಾರಣಕ್ಕಾಗಿ ಈ ಘಟನೆ ನಡೆಯಿತು ಎಂಬ ಮಾಹಿತಿ ಲಭ್ಯವಾಗಿರಲಿಲ್ಲ. ಪತಿ ಸತೀಶ್​​​ ಅಡುಗೆ ಮನೆ ಚಾಕು ಬಳಸಿ ಮಗುವನ್ನು ಗಾಯಗೊಳಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿತ್ತು. ಇದಾದ ಬಳಿಕ ಹೆಂಡತಿ ಮೇಲೂ ಹಲ್ಲೆ ಮಾಡಿದ್ದ. ಇದರ ಬೆನ್ನಲ್ಲೇ ತಾನು ಆತ್ಮಹತ್ಯೆಗೆ ಶರಣಾಗಿದ್ದ.

ಇದನ್ನೂ ಓದಿ:7 ತಿಂಗಳ ಮಗು ಹತ್ಯೆ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆಗೈದು ಪತಿ ಆತ್ಮಹತ್ಯೆ

Last Updated : Sep 4, 2023, 6:43 PM IST

ABOUT THE AUTHOR

...view details