ಕತಿಹಾರ್ (ಬಿಹಾರ):ತಂದೆಯೊಬ್ಬ ತನ್ನ 14 ವರ್ಷದ ಪುತ್ರನ ಶವವನ್ನು, ಚೀಲದೊಳಗೆ ಇಟ್ಟುಕೊಂಡು ಮರಣೋತ್ತರ ಪರೀಕ್ಷೆಗಾಗಿ 3 ಕಿಮೀ ಬರಿಗಾಲಿನಲ್ಲಿ ನಡೆದು ಆಸ್ಪತ್ರೆಗೆ ಕೊಂಡೊಯ್ದ ಘಟನೆ ಕತಿಹಾರ್ನಲ್ಲಿ ನಡೆದಿದೆ.
ಲೆರು ಯಾದವ್ ಅವರ ಪುತ್ರ ಹರಿಯೋಮ್ ಯಾದವ್ ಫೆಬ್ರವರಿ 26 ರಂದು ನಾಪತ್ತೆಯಾಗಿದ್ದನು. ನಂತರ ಆತ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು. ಈ ಸಂಬಂಧ ಈಟಿವಿ ಭಾರತ ಘಟನಾ ಸ್ಥಳಕ್ಕೆ ತಲುಪಿದ ವೇಳೆ, ತಂದೆಯು ಮಗನ ಮೃತ ದೇಹವನ್ನು ಚೀಲದೊಳಗಿಟ್ಟು ಕೊಂಡೊಯ್ಯುವ ದೃಶ್ಯ ಕಂಡುಬಂದಿತು.
ಮರಣೋತ್ತರ ಪರೀಕ್ಷೆಗಾಗಿ ಚೀಲದೊಳಗೆ ಶವ ಹೊತ್ತೊಯ್ದ ತಂದೆ ಈ ಕುರಿತು ಪ್ರತಿಕ್ರಿಯಿಸಿರುವ ಮೃತನ ತಂದೆ ಲೆರು ಯಾದವವ್, ಖೇರಿಯಾ ಘಾಟ್ನಿಂದ ನನ್ನ ಮಗ ಕಾಣೆಯಾಗಿದ್ದ. ದೋಣಿ ಮೂಲಕ ಪ್ರಯಾಣಿಸುವಾಗ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾನೆ ಎಂದು ಕೆಲವರು ನನಗೆ ಮಾಹಿತಿ ನೀಡಿದರು. ನಾನು ಅವನನ್ನು ಹುಡುಕಲು ಪ್ರಯತ್ನಿಸಿ, ವಿಫಲನಾದೆ. ಬಳಿಕ ಗೋಪಾಲಪುರ ಪೊಲೀಸ್ ಠಾಣೆಯಿಂದ ನನಗೆ ಕರೆ ಬಂದಿತು. ನಾನು ಅಲ್ಲಿಗೆ ಹೋಗಿ ನನ್ನ ಮಗನನ್ನು ಆತ ಧರಿಸಿದ್ದ ಬಟ್ಟೆಯಿಂದ ಗುರುತಿಸಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವಂತೆ ಪೊಲೀಸರು ನಿರ್ದೇಶನ ನೀಡಿದರು. ನಾನು ಆಂಬ್ಯುಲೆನ್ಸ್ ಕೇಳಿದಾಗ, ಅವರು ನಿರಾಕರಿಸಿದರು. ಹಾಗಾಗಿ ಮಗನ ದೇಹವನ್ನು ನಾನೇ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದರು.
ಓದಿ:ಭೀಕರ ರಸ್ತೆ ಅಪಘಾತ: 5 ಸಾವು, 24 ಜನರಿಗೆ ಗಾಯ
ಈಟಿವಿ ಭಾರತ್ ಕತಿಹಾರ್ ಎಸ್‌ಡಿಪಿಒ ಅವರನ್ನು ಸಂಪರ್ಕಿಸಿ ವಿಚಾರಿಸಿದ ವೇಳೆ ಮೊದಲು ಅವರು ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಮೃತನ ತಂದೆ ಶವವನ್ನು ಚೀಲದಲ್ಲಿ ಸಾಗಿಸುವ ವಿಡಿಯೋವನ್ನು ಅವರಿಗೆ ತೋರಿಸಿದ ವೇಳೆ, ಅದು ನಿಜವೆಂದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.