ವೆಲ್ಲೂರು (ತಮಿಳುನಾಡು): ಪತ್ನಿಯ ಮೇಲಿನ ಅನುಮಾನದಿಂದ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಬ್ಬರು ತನ್ನ 26 ದಿನಗಳ ಮಗುವಿನ ಮೇಲೆ ಅಮಾನುಷವಾಗಿ ದಾಳಿ ಮಾಡಿದ ಆರೋಪ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಸದ್ಯ ಹಸುಳೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ತಂದೆ ತಲೆ ಮರೆಸಿಕೊಂಡಿದ್ದಾನೆ. ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ಪತ್ತೆಗೆ ಕ್ರಮ ವಹಿಸಿದ್ದಾರೆ.
ಇದನ್ನೂ ಓದಿ:ಪತ್ನಿಯ ಶೀಲ ಶಂಕಿಸಿ ಪತಿಯಿಂದ ಹತ್ಯೆ ಯತ್ನ: ಸತ್ತಳೆಂದು ಭಾವಿಸಿ ಆಕೆಯನ್ನು ರಸ್ತೆ ಬದಿ ಎಸೆದ?!
ವೆಲ್ಲೂರು ಜಿಲ್ಲೆಯ ಆನೈಕಟ್ಟು ತಾಲೂಕಿನ ದೇವಿಚೆಟ್ಟಿಕುಪ್ಪಂ ಗ್ರಾಮದ ಮಣಿಕಂದನ್ ಎಂಬಾತನೇ ಚಿಕ್ಕ ಮಗುವಿನ ಮೇಲೆ ಹಲ್ಲೆ ಮಾಡಿದ ಆರೋಪಿ. ಈತ ಚೆನ್ನೈನ ತಾಂಬರಂ ವಿಭಾಗದಲ್ಲಿ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ಸೆಪ್ಟೆಂಬರ್ನಲ್ಲಿ ವೆಲ್ಲೂರು ಜಿಲ್ಲೆಯ ರೆಟ್ಟಿಯೂರು ಗ್ರಾಮದ ಯುವತಿಯನ್ನು ವಿವಾಹವಾಗಿದ್ದಾನೆ.
ಕಳೆದ ತಿಂಗಳಷ್ಟೇ ಪತ್ನಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಪತ್ನಿಯ ಗರ್ಭಾವಸ್ಥೆಯ ಸಮಯದಲ್ಲಿ ತನ್ನ ಕೆಲಸದ ನಿಮಿತ್ತ ಜಿಲ್ಲೆಯಿಂದ ಮಣಿಕಂದನ್ ಹೊರಗಡೆ ಇದ್ದ. ಮಹಿಳೆ ತವರು ಮನೆಗೆ ಬಂದಿದ್ದಳು. ಇದೇ ಭಾನುವಾರ ಮಗುವನ್ನು ನೋಡಲು ಅತ್ತೆಯ ಮನೆಗೆ ಮಣಿಕಂದನ್ ಹೋಗಿದ್ದ. ತನ್ನ ಹೆಂಡತಿ ಮತ್ತು ಮಗುವನ್ನು ನೋಡಿದ ಮೇಲೆ ಪತ್ನಿಯನ್ನು ಅನುಮಾನಿಸಲು ಶುರು ಮಾಡಿದ್ದಾನೆ.