ಕರ್ನಾಟಕ

karnataka

ETV Bharat / bharat

ತಂದೆಯಿಂದ ಮಗಳ ಮೇಲೆ ನಿರಂತರ ಅತ್ಯಾಚಾರ: ಪರೀಕ್ಷೆ ಬರೆಯಲು ತೆರಳುತ್ತಿದ್ದವಳು ಹೋಗಿದ್ದು ಠಾಣೆಗೆ - ತಂದೆಯಿಂದ ಮಗಳ ಮೇಲೆ ನಿರಂತರ ಅತ್ಯಾಚಾರ

ಸ್ವಂತ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ - ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ ಸಂತ್ರಸ್ತೆ- ಸಂತ್ರಸ್ತೆಯ ಪೋಷಕರ ಬಂಧನ

father-arrested-for-raping-minor-daughter-in-rewari-haryana
ತಂದೆಯಿಂದ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ: ಪರೀಕ್ಷೆ ಬರೆಯಲು ತೆರಳುತ್ತಿದ್ದವಳು ಹೋಗಿದ್ದು ಠಾಣೆಗೆ

By

Published : Mar 1, 2023, 11:01 PM IST

ರೇವಾರಿ (ಹರಿಯಾಣ): ಮೂರು ವರ್ಷಗಳ ಕಾಲ ತನ್ನ 18 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹರಿಯಾಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 12ನೇ ತರಗತಿಯ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಕ್ಕೆ ಸಂತ್ರಸ್ತೆ ತೆರಳುತ್ತಿದ್ದರು. ಈ ವೇಳೆ, ತನ್ನ ಮನಸು ಬದಲಿಸಿ ನೇರವಾಗಿ ಪೊಲೀಸ್​ ಠಾಣೆಗೆ ತನ್ನ ಪಾಪಿ ತಂದೆ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ಪ್ರಕಾರ, ನನ್ನ ತಂದೆ ಕಳೆದ ಮೂರು ವರ್ಷಗಳಿಂದ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೈ, ಕಾಲುಗಳನ್ನು ಕತ್ತರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇನ್ನು ಈ ವಿಷಯ ತಾಯಿಗೂ ತಿಳಿದಿದ್ದು, ತಾಯಿಯೂ ಬೆಂಬಲ ನೀಡಿದ್ದಾಗಿ ಸಂತ್ರಸ್ತೆ ಹೇಳಿಕೊಂಡಿದ್ದಾಳೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸದ್ಯ ಸಂತ್ರಸ್ತೆಗೆ 18 ವರ್ಷ ವಯಸ್ಸಾಗಿದೆ. ದೂರಿನ ಪ್ರಕಾರ, ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ಕಳೆದ 3 ವರ್ಷಗಳಿಂದ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಪೋಷಕರ ವಿರುದ್ಧ ಸೆಕ್ಷನ್ 120 ಬಿ, 344, 376 (2) 506 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ :ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ

ABOUT THE AUTHOR

...view details